Header Ads
Header Ads
Breaking News

ವಿಟ್ಲ: ಅ.17ರಂದು ಶ್ರೀ ರಾಮ ಫ್ರೆಂಡ್ಸ್ ವತಿಯಿಂದ ಪಿಲಿಗೊಬ್ಬು ಸೀಸನ್-4

ವಿಟ್ಲದ ಶ್ರೀ ರಾಮ ಫ್ರೆಂಡ್ಸ್ ವತಿಯಿಂದ ದಸರಾ ಹಬ್ಬದ ಪ್ರಯುಕ್ತ 4ನೇ ವರ್ಷದ ಪಿಲಿಗೊಬ್ಬು ಸೀಸನ್-4 ಅ.17 ರ ಸಂಜೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ 33,333ರೂ. ನಗದು ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹಕ ನಗದು ಬಹುಮಾನ ನೀಡಲಾಗುತ್ತದೆ. 

ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಉದ್ಯಮಿ ಅಶೋಕ್ ಕುಮಾರ್ ರೈ, ಜಗನ್ನಾಥ್ ಸಾಲಿಯಾನ್, ರಂಜಿತ್ ಎಸ್ ಶೆಟ್ಟಿ ಗುಬ್ಯ, ದಿವಕರ ದಾಸ್ ನೇರ್ಲಾಜೆ, ರಾಧಾಕೃಷ್ಣ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ, ಬಜರಂಗ ದಳ ಸಂಚಾಲಕ ಅಕ್ಷಯ್ ರಜಪೂತ್, ಗೌತಮ್, ಐಶ್ವರ್ಯ ಮೊದಲಾದವರು ಭಾಗವಹಿಸಲಿದ್ದಾರೆ.

Related posts

Leave a Reply