Header Ads
Header Ads
Breaking News

ವಿಟ್ಲ: ಕನ್ಯಾನ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಉರೂಸ್ ಹಾಗೂ ನವೀಕೃತ ನೂತನ ಮಖಾಂ ಕಟ್ಟಡ ಉದ್ಘಾಟನೆ

ಕನ್ಯಾನ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಉದಯಾಸ್ತಮಾನ ಉರೂಸ್ ಹಾಗೂ ನವೀಕೃತ ನೂತನ ಮಖಾಂ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಿತು. ಝೈನುಲ್ ಉಲಮಾ ಮಾಣಿ ಉಸ್ತಾದ್ ಉರೂಸ್ ಸಮಾರಂಭಕ್ಕೆ ಚಾಲನೆ ನೀಡಿದರು.

ಕನ್ಯಾನ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ನವೀಕೃತ ಕಟ್ಟಡವನ್ನು ಉದ್ಘಾಟಿಸಿದರು. ಝೈನುಲ್ ಉಲಮಾ ಮಾಣಿ ಉಸ್ತಾದ್ ಉರೂಸ್ ಸಮಾರಂಭಕ್ಕೆ ಚಾಲನೆ ನೀಡಿದರು. ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು. ಕನ್ಯಾನ ರಹ್ಮಾನಿಯ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬಾಳ್ತ್ರೋಡಿ ಧ್ವಜಾರೋಹಣಗೈದರು. ಕನ್ಯಾನ ಮುದರಿಸ್ ಕೆ.ಎಂ ಇಬ್ರಾಹಿಂ ಫೈಝಿ ಭಾಗವಹಿಸಿದ್ದರು.

ಮಾಜಿ ಸಚಿವ ಬಿ ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಸದಸ್ಯ ಕುಮಾರ್ ಭಟ್ ಬದಿಕೋಡಿ, ಉಸ್ಮಾನ್ ಹಾಜಿ ಕರೋಪಾಡಿ, ಕನ್ಯಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್, ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ್ ಭಟ್, ಸಿರಾಜುದ್ದೀನ್ ಸಖಾಫಿ ಕನ್ಯಾನ, ಕೆಎಂ ಅಶ್ರಫ್ ಸಖಾಫಿ ಕನ್ಯಾನ, ಕರೋಪಾಡಿ ಮುದರ್ರಿಸ್ ಅಬ್ದುಲ್ ಹಕೀಂ ಮದನಿ, ಉಕ್ಕುಡ ಮುದರ್ರಿಸ್ ಹಾಫಿಲ್ ಅಹ್ಮದ್ ಸಖಾಫಿ ಅಲ್ ಕಾಮಿಲಿ, ಕುಕ್ಕಾಜೆ ಮುದರ್ರಿಸ್ ಮುಹಮ್ಮದ್ ನಿಯಾಝ್ ಸಖಾಫಿ ಅಲ್ ಕಾಮಿಲಿ, ಪೊನ್ನೆಂಗಳ ಮುದರ್ರಿಸ್ ಅಬೂಬಕ್ಕರ್ ಸಅದಿ, ಪೆರುವಾಯಿ ಮುದರ್ರಿಸ್ ಮಹಮ್ಮದ್ ಶರೀಫ್ ಮದನಿ, ಕಾನತ್ತಡ್ಕ ಮುದರ್ರಿಸ್ ಶೈಖ್ ಅಬ್ದುಲ್ಲಾ ಸಖಾಫಿ, ದರ್ಖಾಸ್ ಕಾನತ್ತಡ್ಕ ಖತೀಬು ಅಬ್ದುಲ್ ರಝಾಕ್ ನಈಮಿ, ಅಳಿಕೆ ಖತೀಬು ಅಬ್ದುಲ್ ಖಾದಿರ್ ಸಖಾಫಿ, ಎಂ.ಕೆ ಮಹಮ್ಮದ್ ಕುಂಞ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply