Header Ads
Header Ads
Header Ads
Breaking News

ವಿಟ್ಲ ಕಸಬಾ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಸಮಸ್ಯೆ ಗ್ರಾಮಸ್ಥರ ಮೂಲಕ ಸೆ.20ರಂದು ಪ್ರತಿಭಟನೆಗೆ ನಿರ್ಧಾರ

ವಿಟ್ಲ ಕಸಬಾ ಗ್ರಾಮದ ವ್ಯಾಪ್ತಿಯಲ್ಲಿನ ಅಸರ್ಮಪಕ ರಸ್ತೆಗಳ ವಿರುದ್ಧ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸೇರಿ ಸೆ. 20 ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ಗ್ರಾಮಸ್ಥರಾದ ಕೆ ಸೀತಾರಾಮ ಶೆಟ್ಟಿ ಮಾತನಾಡಿ, ಪುತ್ತೂರು ಪ್ರದೇಶಗಳನ್ನು ಸಂಪರ್ಕ ಕಲ್ಪಿಸುತ್ತದೆ. ಸುಮಾರು 35 ವರ್ಷಗಳ ಹಿಂದೆ ಊರಿನವರ ಬೇಡಿಕೆ ಮೇರೆಗೆ ಹಂತ ಹಂತದಲ್ಲಿ ಮರು ಡಾಮರೀಕರಣ ನಡೆದಿತ್ತು.

ಇದೀಗ ಆಟೋ ರಿಕ್ಷಾ, ಟೆಂಪೊ, ಕಾರು ಹಾಗೂ ಘನಗಾತ್ರದ ವಾಹನಗಳು ಸೇರಿ 400ರಿಂದ 500 ರ ವರೆಗೆ ವಾಹನಗಳು ಸಂಚಾರ ಮಾಡುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಹೊಂಡ ನಿರ್ಮಾಣಗೊಂಡಿದೆ. ಇದರಿಂದ ವಾಹನ ಚಾಲಕರು ಹಾಗೂ ಪಾದಚಾರಿಗಳು ಪ್ರತಿನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವ್ರು ದೂರಿದರು. ಮಾಮೇಶ್ವರ ಕಟ್ಟೆಯಿಂದ ಮೆರವಣಿಗೆ ಮೂಲಕ ಮಂಗಳಪದವು ಪೇಟೆಗೆ ಬಂದು ಅಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಕಪ್ಪ ಗೌಡ ಅವರು ತಿಳಿಸಿದ್ದಾರೆ.

Related posts

Leave a Reply