Header Ads
Header Ads
Breaking News

ವಿಟ್ಲ: ಕೆದಿಲ ಶ್ರೀ ದೇವಿ ಭಜನಾ ಮಂದಿರದಲ್ಲಿ ಮದ್ಯ ವರ್ಜನ ಶಿಬಿರ ಸಮಾರೋಪ ಸಮಾರಂಭ

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆ ಬಂಟ್ವಾಳ ತಾಲೂಕು, ಅಖಿಲ ಕರ್ನಾಟಕ ರಾಜ್ಯ ಜನ ಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯ ಸಂಯಮ ಮಂಡಳಿ ಬೆಂಗಳೂರು ವತಿಯಿಂದ ಕೆದಿಲ  ಮಂದಿರದಲ್ಲಿ ೭ ದಿನಗಳ ಕಾಲ ನಡೆದ 1268ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭ ಗಾಂಧಿನಗರದಲ್ಲಿ ನಡೆಯಿತು.ಜನ ಜಾಗೃತಿ ವೇದಿಕೆ ಬಂಟ್ವಾಳ, ಮದ್ಯ ವರ್ಜನ ವ್ಯವಸ್ಥಾಪಕ ಸಮಿತಿ ಮಾಣಿ ವಲಯ, ಪ್ರಗತಿ ಬಂದು ಸ್ವ-ಸಹಾಯ ಒಕ್ಕೂಟ ಮಾಣಿ, ಶ್ರೀ ದೇವಿ ಭಜನಾ ಮಂದಿರ ಗಾಂಧಿ ನಗರ ಕೆದಿಲ, ರೋಟರಿ ಕ್ಲಬ್ ಬಂಟ್ವಾಳ, ನವ ಜೀವನ ಸಮಿತಿ ಮಾಣಿ ಹಾಗೂ ಇನ್ನಿತರ ಸಂಘ ಸಂಸ್ಥೆ ಗಳ ಮತ್ತು ಗ್ರಾಮಸ್ಥರ ಸಹಕಾರ ದೊಂದಿಗೆ ಮದ್ಯ ವರ್ಜನ ಶಿಬಿರ ನಡೆಯಿತು.ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಉತ್ತಮ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು.ಸಾಮಾರಸ್ಯ ಕಾಪಾಡಿಕೊಳ್ಳಬೇಕು.

ಸಮರ್ಥ ನಾಯಕರ ಮೂಲಕ ಸಮಾಜ ಕಟ್ಟುವ ಕೆಲಸ ಆಗಬೇಕು. ದುಶ್ಚಟ ಮುಕ್ತರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಮಾನವೀಯ ಮೌಲ್ಯವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ ಮದ್ಯವರ್ಜನ ಶಿಬಿರಗಳ ಮೂಲಕ ಮನಪರಿವರ್ತನೆ ಸಾಧ್ಯ. ಇದರಿಂದ ಮನೆಯಲ್ಲಿ ಬೆಳಕು ಚೆಲ್ಲುತ್ತದೆ. ವೀರೇಂದ್ರ ಹೆಗ್ಗಡೆ ಅವರ ದೊಡ್ಡ ಯೋಜನೆ ಇದಾಗಿದೆ. ಇಂತಹ ಯೋಜನೆಗಳನ್ನು ಸದ್ಭಳಕೆ ಮಾಡಬೇಕು. ದುಶ್ಚಟ ಮುಕ್ತರಾದಾಗ ಸುಂದರ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದರು.ಸೆ.೨೪ರಿಂದ ಪ್ರಾರಂಭಗೊಂಡ ಶಿಬಿರ ಅಕ್ಟೋಬರ್ 1ವರೆಗೆ ಆಯೋಜಿಸಲಾಗಿತ್ತು. ಶಿಬಿರದಲ್ಲಿ 118 ಮಂದಿ ಭಾಗವಹಿಸಿದ್ದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು ದಂಪತಿಗಳನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳನ್ನು ಮಹಿಳೆಯರು ಆರತಿ ಎತ್ತುವ ಮೂಲಕ ಶುಭ ಹಾರೈಸಿದರು. ಬಂಟ್ವಾಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್, ಯೋಜನಾಧಿಕಾರಿ ಜಯನಂದ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಜನಜಾಗೃತಿ ವೇದಿಕೆಯ ಮಾಣಿ ವಲಯಾಧ್ಯಕ್ಷ ಬಾಲಕೃಷ್ಣ ಆಳ್ವ, ಶಿಬಿರದ ವೈದ್ಯಾ ಡಾ.ಮನೋಹರ, ತಾಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಕುಶಾಲ ಪೆರಾಜೆ, ಕೆದಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಕುಲಾಲು, ಕಡೆಶ್ವಾಲ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಶೆಟ್ಟಿ, ಮಾಣಿ ವಲಯ ಮೇಲ್ವಿಚಾರಕಿ ಭವಾನಿ, ಶಿಬಿರಾಧಿಕಾರಿ ದಿವಕರ್, ಮಹಾಬಲ ಭಟ್, ವಸಂತ ಪ್ರಭು, ಪುಷ್ಪಲತಾ, ಜನಾರ್ಧನ ಕುದುಮಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply