Header Ads
Header Ads
Header Ads
Breaking News

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2016-17 ನೇ ಸಾಲಿನಲ್ಲಿ 430.97 ಕೋಟಿ ವ್ಯವಹಾರ

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2016-17 ನೇ ಸಾಲಿನಲ್ಲಿ 430.97 ಕೋಟಿ ವ್ಯವಹಾರ ನಡೆಸಿದ್ದು, 2.48 ಕೋಟಿಗೂ ಅಧಿಕ ಲಾಭಗಳಿಸಿದೆ. ಕೇಂದ್ರ ಕಛೇರಿಯನ್ನು ಸಿಬಿ‌ಎಸ್ ಪದ್ದತಿ ಮೂಲಕ ವ್ಯವಹರಿಸಲು ಅನುವು ಮಾಡಲಾಗಿದ್ದು, ಹಂತ ಹಂತವಾಗಿ ಶಾಖೆಗಳನ್ನೂ ಇದರ ಕೆಳಗೆ ತರಲಾಗುವುದು. ಇದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಸೇವೆಯಂತೆ ಸೌಲಭ್ಯ ಸಿಗಲಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಎಲ್ ಎನ್ ಕೂಡೂರು ಹೇಳಿದರು.

ಅವರು ಶನಿವಾರ ವಿಟ್ಲ ಶಾಂತಿನಗರ ಅಕ್ಷಯ ಸಮುದಾಯ ಭವನದಲ್ಲಿ ನಡೆದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 62 ನೇ ವಾರ್ಷಿಕ ಮಹಾ ಸಭೆಯಲ್ಲಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು.

ಈ ವರದಿ ವರ್ಷದಲ್ಲಿ ಸದಸ್ಯರಿಗೆ ಶೇ.20ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ. ಸರದಿ ವರ್ಷದಲ್ಲಿ 49.31 ಕೋಟಿ ಸಾಲ ವಿತರಿಸಿದ್ದು, ಶೇ 94 ಸಾಲ ಮರುಪಾವತಿಯಾಗಿದೆ. ಬ್ಯಾಂಕ್ ಆಡಿಟ್ ವರ್ಗೀಕರಣದಲ್ಲಿ ಹಲವು ವರ್ಷಗಳಿಂದ ಎ ತರಗತಿಯಲ್ಲಿ ಮುನ್ನಡೆಯಲ್ಲಿದೆ. ಎಲ್ಲಾ ಶಾಖೆಗಳಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದ್ದು ಎಲ್ಲವೂ ಲಾಭದಲ್ಲಿದೆ. ನೋಟಿನ ಅಪಮೌಲೀಕರಣದ ಸಮಯದಲ್ಲೂ ಎಲ್ಲಾ ವ್ಯವಹಾರಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ ಎಂದರು.

ಬ್ಯಾಂಕ್‌ನ ಹಿರಿಯ ಸದಸ್ಯರಾದ ಅಳಿಕೆ ಕೆ ಎಸ್ ಕೃಷ್ಣ ಭಟ್ ಹಾಗೂ ಡಾ. ಕೂಡೂರು ರಮಾನಂದ ಶೆಟ್ಟಿ ಮಹಾ ಸಭೆಯನ್ನು ಉದ್ಘಾಟಿಸಿದರು. ಬ್ಯಾಂಕ್‌ನ ಮುಖ್ಯಕಾರ್ಯ ನಿರ್ವಾಹಕ ವಿ ಎಸ್ ಕೆದಿಲಾಯ ವರದಿ ಮಂದಿಸಿದರು.

ಬ್ಯಾಂಕ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಚ್ ಜಗನ್ನಾಥ ಸಾಲಿಯಾನ್, ನಿರ್ದೇಶಕರುಗಳಾದ ಎನ್ ಅನಂತ ಭಟ್, ಕೆ ಎಸ್ ಪ್ರಕಾಶ್ ಉರಿಮಜಲು, ಎಂ ಹರೀಶ್ ನಾಯಕ್, ವಿ. ದಿನೇಶ್, ಉದಯಕುಮಾರ್ ಎ., ಮನೋರಂಜನ್ ಕೆ ಆರ್, ವಿಶ್ವನಾಥ ಎಂ., ಕೃಷ್ಣ ಕೆ, ಪ್ರೀತಾ ಭಟ್ ಕೆ, ಗೀತಾ, ಕಾನೂನು ಎಂ ಗೋಪಾಲಕೃಷ್ಣ ಉಪಸ್ಥಿತರಿದ್ದರು.

Related posts

Leave a Reply