Header Ads
Breaking News

ವಿಟ್ಲ : ಜಾನುವಾರು ಸಾಗಾಟ ಮಾಡುತ್ತಿದ್ದ ತಂಡ ಪತ್ತೆ ಹಚ್ಚಿದ ಪೊಲೀಸರು

ವಿಟ್ಲ: ಜೀಪಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿದ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ಪೊಲೀಸರ ತಂಡ ಒಬ್ಬ ಆರೋಪಿ, ದನ, ಹಾಗೂ ವಾಹನವನ್ನು ವಶಪಡಿಸಿಕೊಂಡ ಘಟನೆ ಇಡ್ಕಿದು ಗ್ರಾಮದಲ್ಲಿ ನಡೆದಿದೆ. 

ಇಡ್ಕಿದು ಗ್ರಾಮದ ಮಿತ್ತೂರು ಬರ್ಕೊಡಿ ಏಮಾಜೆ ನಿವಾಸಿ ಪದ್ಮನಾಭ ಗೌಡ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಮಿತ್ತೂರು ನಿವಾಸಿ ಹಂಝ ಎಂಬಾತ ಪರಾರಿಯಾಗಿದ್ದಾರೆ. ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿ ಜೀಪಿನಲ್ಲಿ ಜಾನುವಾರನ್ನು ಸಾಗಾಟ ಮಾಡುತ್ತಾರೆಂಬ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಎಸೈ ಮತ್ತು ಸಿಬ್ಬಂದಿಗಳು ತೆರಳಿದ್ದು, ಮಿತ್ತೂರು ಕಡೆಯಿಂದ ಸುರ್ಯ ಕಡೆಗೆ ಜೀಪಿನಲ್ಲಿ ಒಂದು ದನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ವಿಟ್ಲ ಪೊಲೀಸರು ಒಬ್ಬ ಆರೋಪಿ, ಒಂದು ದನ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *