Header Ads
Header Ads
Breaking News

ವಿಟ್ಲ : ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ – ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರರು

ವಿಟ್ಲ: ದ್ವಿಚಕ್ರ ವಾಹನವೊಂದಕ್ಕೆ ಅತಿಯಾದ ವೇಗದಲ್ಲಿ ಬಂದ ಕಾರೊಂದು ಡಿಕ್ಕಿಯಾಗಿ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟ ಘಟನೆ ವಿಟ್ಲ ನಾಯಕ್ಸ್ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಭಾನುವಾರ ನಡೆದಿದೆ.

ಮಂಕುಡೆ ಮೂಲಕದ ತಾಯಿ ಮಗಳು ದ್ವಿಚಕ್ರವಾಹನದಲ್ಲಿ ಉಕ್ಕುಡ ಕಡೆಯಿಂದ ಮಂಕುಡೆ ಕಡೆಗೆ ಹೋಗುತ್ತಿದ್ದ ಸಂದರ್ಭ ಪೆಟ್ರೋಲ್ ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಪಂಪ್ ಗೆ ಹೋಗಿದ್ದಾರೆ. ಪಂಪ್ ನಿಂದ ಬಲ ಬದಿಯನ್ನು ಗಮನಿಸದೆ ಏಕಾಏಕಿ ಮುಖ್ಯ ರಸ್ತೆಗೆ ಬರುವ ಸಮಯ ಅತಿಯಾದ ವೇಗದಲ್ಲಿ ಹಾಗೂ ಅಜಾಗರೂಕತೆಯಿಂದ ನಾಲ್ಕು ಮಾರ್ಗ ಜಂಕ್ಷನ್ ಕಡೆಯಿಂದ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ದ್ವಿಚಕ್ರವಾಹನದಲ್ಲಿದ್ದ ತಾಯಿ ಮಗಳು ಎತ್ತಿ ಎಸೆಯಲ್ಪಟ್ಟಿದ್ದಾರೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಈ ಅಪಘಾತದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Related posts

Leave a Reply

Your email address will not be published. Required fields are marked *