Breaking News

ವಿಟ್ಲ ನಾಲ್ಕು ಮಾರ್ಗ ಜಂಕ್ಷಣ್ ದುಃಸ್ಥಿತಿ

ವಿಟ್ಲ: ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ಅಂದ್ರೆ ಸಾಕು. ಅದು ವಿಟ್ಲ ಪೇಟೆಯ ಕೇಂದ್ರ ಸ್ಥಳ. ವಿಟ್ಲದಿಂದ ಬೇರೆ ಯಾವುದೇ ಪ್ರದೇಶಕ್ಕೆ ಹೋಗುವುದಾದರೆ ಈ ನಾಲ್ಕು ಮಾರ್ಗ ಜಂಕ್ಷನ್ ದಾಟಿಕೊಂಡೇ ಹೋಗಬೇಕು. ಆದ್ರೆ ಇದೀಗ ಈ ನಾಲ್ಕು ಮಾರ್ಗ ಜಂಕ್ಷನ್ ದುಸ್ಥಿತಿ ಕೇಳೊರಿಲ್ಲದಂತಾಗಿದೆ.ವಿಟ್ಲದಿಂದ ಸಾಲೆತ್ತೂರು, ಮಂಗಳೂರು, ಕಾಸರಗೋಡು, ಪುತ್ತೂರು ಕಡೆಗೆ ತೆರಳುವ ವಾಹನಗಳು ಹಾಗೂ ಸಾರ್ವಜನಿಕರು ಈ ನಾಲ್ಕು ಮಾರ್ಗ ಜಂಕ್ಷನ್ ಮೂಲಕವೇ ತೆರಳಬೇಕು. ಕಳೆದ ಕೆಲವು ತಿಂಗಳುಗಳಿಂದ ನಾಲ್ಕು ಮಾರ್ಗ ಜಂಕ್ಷನ್‌ನ ಮಧ್ಯೆದಲ್ಲಿ ಹೊಂಡಗಳು ನಿರ್ಮಾಣ ಹಾಗೂ ರಸ್ತೆ ಬದಿಯ ಸ್ಲ್ಯಾಬ್‌ಗಳು ಮುರಿದ ಪರಿಣಾಮ ಪ್ರತಿನಿತ್ಯ ವಾಹನ ದಟ್ಟನೆ ಹೆಚ್ಚಾಗಲು ಕಾರಣವಾಗಿದೆ.ವಿಟ್ಲದ ಜನತೆಯ ಬಹುವರ್ಷದ ಬೇಡಿಕೆಯಾಗಿದ್ದ ನಾಲ್ಕು ಮಾರ್ಗ ತೆರವು ಕೊನೆಗೂ ಯಶಸ್ಸಿಯಾಗಿ ನಡೆದಿದೆ. ವಾಹನಗಳು ನಾಲ್ಕು ರಸ್ತೆಗಳಿಗೆ ಸರಿಯಾಗಿ ತಿರುಗುತ್ತದೆ. ಆದರೆ ಕೆಲವು ವಿದ್ಯುತ್ ಕಂಬ ಹಾಗೂ ಹೊಂಡಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದು ಕೇವಲ ವಾಹನ ಸಂಚಾರಕ್ಕೆ ತೊಂದರೆವಾಗದೇ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.ಈ ಭಾಗದಲ್ಲಿ ನಾಲ್ಕೈದು ಶಾಲಾ-ಕಾಲೇಜುಗಳಿದ್ದು, ಇದೇ ರಸ್ತೆ ಮೂಲಕ ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಿರುವ ವೇಳೆ ಮುರಿದು ಹೋಗಿರುವ ಸ್ಲ್ಯಾಬ್‌ಗಳ ಎಡೆಗೆ ಕಾಲು ಜಾರಿಕೊಳ್ಳುತ್ತದೆ. ಇದೇ ರೀತಿಯ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇದೆ. ಜೋರಾಗಿ ಮಳೆ ಬಂದಾಗ ಇಲ್ಲಿಯ ಪರಿಸ್ಥಿತಿ ಶೋಚನೀಯವಾಗಿದೆ.ಸೋಮವಾರದಿಂದ ಶನಿವಾರ ವರೆಗೆ ಇಲ್ಲಿ ಪರಿಸ್ಥಿತಿ ಹೇಳಿದ್ರೆ ಮುಗಿಯೊದು. ಒಂದೆಡೆ ಹೊಂಡ ಹಾಗೂ ಸ್ಲ್ಯಾಬ್‌ಗಳ ಸಮಸ್ಯೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದರೆ ಇನ್ನೊಂದೆಡೆ ಅಪಾಯಕಾರಿ ವಿದ್ಯುತ್ ಕಂಬಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ವಿಟ್ಲದ ಜನತೆಗೆ ಒಂದಲ್ಲೊಂದು ರೀತಿಯಲ್ಲಿ ಕಂಟಕ ಎದುರಾಗುತ್ತಿರುವುದು ಮಾತ್ರ ಸತ್ಯಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತ್‌ನಲ್ಲಿ ಗಮನಕ್ಕೆ ತಂದರೆ ಇದು ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿದ್ದಾರೆಂದು ಹಾರೈಕೆ ಉತ್ತರ ನೀಡುತ್ತಿದ್ದಾರೆ. ಜನರು ಪ್ರತಿನಿತ್ಯ ಕಷ್ಟ ಪಡುತ್ತಿರುವ ಬಗ್ಗೆ ಪಟ್ಟಣ ಪಂಚಾಯತ್ ಗಮನಕ್ಕೆ ಬಂದರೂ ಒಂದು ತಾತ್ಕಾಲಿಕ ಕಾಮಗಾರಿಯನ್ನದ್ರೂ ಮಾಡಬಹುದಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Related posts

Leave a Reply