Header Ads
Header Ads
Header Ads
Breaking News

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ರಾಜೇಶ್ ವಿಟ್ಲ ನೇತೃತ್ವದಲ್ಲಿ ನೃತ್ಯೋತ್ಸವ ನಮೋ ನಮೋ ಭಾರತ ನೃತ್ಯ ರೂಪಕ

ವಿಟ್ಲ ಮಹಾತೋಭಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ವಿಟ್ಲ ರಾಜೇಶ್ ವಿಟ್ಲ ನೇತೃತ್ವದಲ್ಲಿ ಆರ್.ಕೆ ಆರ್ಟ್ಸ್‌ನ ಚಿಣ್ಣರ ಮನೆ ವತಿಯಿಂದ ನೃತ್ಯೋತ್ಸವ ಹಾಗೂ ನಮೋ ನಮೋ ಭಾರತ ನೃತ್ಯ ರೂಪಕ ವಿಜೃಂಭಣೆಯಿಂದ ನಡೆಯಿತು.

ಕಳೆದ ಹಲವಾರು ವರ್ಷಗಳಿಂದ ವಿಟ್ಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಆರ್.ಕೆ ಆರ್ಟ್ಸ್‌ನ ರಾಜೇಶ್ ಅವರ ನಿರ್ದೇಶನದ ಚಿಣ್ಣರ ಮನೆ ತಂಡ ಹನ್ನೊಂದು ಕಡೆ ಶಾಖೆಗಳನ್ನು ಹೊಂದಿದ್ದು, ಜನಪ್ರಿಯತೆಗೆ ಕಾರಣವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಾರಿ ರಾಜೇಶ್ ವಿಟ್ಲ ಅವರ ತಂಡ ಈ ಬಾರಿ ವಿಶಿಷ್ಟವಾಗಿ ಸಹಕಾರ ನೀಡಿದ ಮೂವರು ವ್ಯಕ್ತಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಸಂದರ್ಭ ಲೋಕೇಶ್ ಚಂದಳಿಕೆ, ದಯಾನಂದ ಚಂದಳಿಕೆ ಹಾಗೂ ರಕ್ಷಿತ್ ಪುತ್ತೂರು ಅವರನ್ನು ಸನ್ಮಾನಿಸಲಾಯಿತು.

ನೃತ್ಯೋತ್ಸವದಲ್ಲಿ ಚಿಣ್ಣರ ಮನೆ ತಂಡದಿಂದ ನೂರಾರು ವಿದ್ಯಾರ್ಥಿಗಳಿಂದ ಸುಮಾರು ೧೫ ವಿವಿಧ ನೃತ್ಯಗಳು ಪ್ರದರ್ಶನಗೊಂಡವು. ಪ್ರತಿಯೊಂದು ನೃತ್ಯದಲ್ಲಿ ವಿವಿಧ ಸಂದೇಶಗಳನ್ನು ಸಾರಲಾಯಿತು. ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತ, ನವರಾತ್ರಿ ಉತ್ಸವದ ನೃತ್ಯ, ತುಳು ಚಲನಚಿತ್ರಗಳ ಹಾಡಿನ ನೃತ್ಯ, ತುಳುನಾಡಿನ ಗಂಡುಕಲೆ ಯಕ್ಷಗಾನ ನೃತ್ಯಗಳು ತುಳುನಾಡಿನ ಪರಂಪರೆಯನ್ನು ಎತ್ತಿ ತೋರಿಸಿದೆ. ಅವುಗಳ ಪೈಕಿ ಚಿಣ್ಣರ ಮನೆ ತಂಡದ ರಾಜೇಶ್ ವಿಟ್ಲ ಸ್ವತಃ ಅವರೇ ಸ್ತ್ರೀ ವೇಷ ಧರಿಸಿ ವೇದಿಕೆ ಕುಣಿದು ಕುಪ್ಪಳಿಸಿದ ದೃಶ್ಯ ನೋಡುಗರ ಮನಗೆದ್ದಿದೆ.

ವಿಶೇಷವಾಗಿ ಈ ಬಾರಿ ನಮೋ ನಮೋ ಭಾರತ ನೃತ್ಯ ರೂಪಕ ಪ್ರದರ್ಶನಗೊಂಡಿದೆ. ನೃತ್ಯದಲ್ಲಿ ಭಾರತ ಮಾತೆಯ ಆಗಮನ ಜನರಲ್ಲಿ ದೇಶ ಪ್ರೇಮವನ್ನು ಹೆಚ್ಚಿಸಿದೆ. ದೇಶ ಭ್ರಷ್ಟಾಚಾರ ಮುಳುಗಿರುವ ಬಗ್ಗೆ ಎಚ್ಚರಿಸುವ ಪ್ರಯತ್ನವೂ ನೃತ್ಯ ರೂಪಕದಲ್ಲಿ ತೋರಿಸಲಾಗಿದೆ. ದೇಶ ಕಾಯುವ ಸೈನಿಕ ತನ್ನ ತಾಯ್ನಿನಾಡಿಗಾಗಿ ಯುದ್ಧ ಭೂಮಿಯಲ್ಲಿ ಹೋರಾಟ ಮಾಡುವ ಸನ್ನಿವೇಶವನ್ನು ನೃತ್ಯರೂಪಕದಲ್ಲಿ ತೋರಿಸಲಾಗಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಭಾವ ಚಿತ್ರವನ್ನು ಅಳವಡಿಸಿ ಅವುಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದ ಕೊನೆಗೆ ಪ್ರೇಕ್ಷಕರಿಂದ ಹುತಾತ್ಮ ಸೈನಿಕರ ಭಾವ ಚಿತ್ರದ ಬಳಿ ಮೇಣದ ಬತ್ತಿ ಇಡುವ ಮೂಲಕ ಅವರಿಗೆ ಶ್ರದ್ಧಾಜಲಿ ಸಲ್ಲಿಸಲಾಯಿತು. ಈ ಒಂದು ನೃತ್ಯರೂಪಕದಲ್ಲಿ ದೇಶ ಪ್ರೇಮ ಹಾಗೂ ದೇಶ ಸೇವೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದಂತಾಗಿದೆ.

ಈ ಸಂದರ್ಭ ಆರ್.ಕೆ ಆರ್ಟ್ಸ್‌ನ ರಾಜೇಶ್ ವಿಟ್ಲ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ರವಿವರ್ಮ, ಕುರಿಯಾ ಗೋಪಾಲಕೃಷ್ಣ ಭಟ್, ಜನಾರ್ಧನ ಪದ್ಮಶಾಲಿ, ವಿಶ್ವನಾಥ ಎಚ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply