Header Ads
Header Ads
Header Ads
Breaking News

ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಸಾಮಾನ್ಯ ಸಭೆ ಮೆಸ್ಕಾಂ ಜನ ಸಂಪರ್ಕ ಸಭೆಯ ಬಗ್ಗೆ ಪ್ರಸ್ತಾಪ 2 ವರ್ಷ ಕಳೆದರೂ ಪಂ.ಉಪಾಧ್ಯಕ್ಷರ ಇನ್ನೂ ಆಯ್ಕೆ ಆಗಿಲ್ಲ ಇದು ಯಾವ ಶಿಷ್ಟಾಚಾರ ಸಭೆಯಲ್ಲಿ ಸದಸ್ಯರ ಹೇಳಿಕೆ

ವಿಟ್ಲ: ಮೆಸ್ಕಾಂ ಜನ ಸಂಪರ್ಕ ಸಭೆ ಪ.ಪಂ. ಸಭಾ ಭವನದಲ್ಲಿ ನಡೆದರೂ ಸಹ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಆಹ್ವಾನವೇ ನೀಡಿಲ್ಲ. ಎರಡು ವರ್ಷವಾಗುತ್ತಾ ಬಂದರೂ ಪ.ಪಂ. ಉಪಾಧ್ಯಕ್ಷರ ಆಯ್ಕೆಯಾಗದಿರುವುದು ಯಾವ ಶಿಷ್ಟಾಚಾರ ಎಂಬ ವಿಚಾರ ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು…

ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ ವಿಟ್ಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಶ್ರೀ ಕೃಷ್ಣ ಸಭೆಯಲ್ಲಿ ಸ್ಪಷ್ಟನೆ ಕೇಳಿದರು. ಇನ್ನು ಮುಂದಕ್ಕೆ ಅಧ್ಯಕ್ಷರ ಹಾಗೂ ಆಡಳಿತ ಸಮಿತಿ ಸದಸ್ಯರ ಗಮನಕ್ಕೆ ಬಾರದೇ ಯಾವುದೇ ಅನುಮತಿ ನೀಡಕೂಡದೆಂದು ನಿರ್ಣಯಿಸಲಾಯಿತು.

ಪಟ್ಟಣ ಪಂಚಾಯಿತಿಯಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದ್ದು, ಹಿಂಬಾಗಿಲನ್ನು ಮುಚ್ಚಬೇಕೆಂದು ಸದಸ್ಯ ರವಿಪ್ರಕಾಶ್ ಹೇಳಿದಾಗ ಹಿಂಬಾಗಿಲನ್ನು ಮುಚ್ಚಬಾರದು, ಬದಲಾಗಿ ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಪ್ರತಿಪಕ್ಷದ ನಾಯಕ ಅಶೋಕ್ ಕುಮಾರ್ ಶೆಟ್ಟಿ ತಿರಗೇಟು ನೀಡಿದರು. ಎರಡೂ ಪಕ್ಷಗಳ ಸದಸ್ಯ ಮಧ್ಯೆ ಕೆಲ ಹೊತ್ತು ಈ ಬಗ್ಗೆ ವಾಗ್ವಾದ ನಡೆಯಿತು.

ಮುಖ್ಯಾಧಿಕಾರಿ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮ್‌ದಾಸ್ ಶೆಣೈ, ಪಕೀರ ಮೂಲ್ಯ, ಶ್ರೀಧರ್ ಮೊದಲಾದವರು ಇದ್ದರು.

ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply