Header Ads
Breaking News

ವಿಟ್ಲ ಪರಿಸರದಲ್ಲಿ ಸರಣಿ ಕಳ್ಳತನ : ನಾಲ್ಕು ಅಂಗಡಿಗಳಿಗೆ ನುಗ್ಗಿದ ಕಳ್ಳರು

ವಿಟ್ಲ: ವಿಟ್ಲದ ಪರಿಸರದಲ್ಲಿ ನಾಲ್ಕು ಅಂಗಡಿಗಳಿಗೆ ನುಗ್ಗಿದ ಕಳ್ಳರು ಸರಣಿ ಕಳ್ಳತನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ವಿಟ್ಲದ ಬೊಬ್ಬೆಕೇರಿಯಲ್ಲಿರುವ ನಾರಾಯಣ ಶೆಟ್ಟಿಗಾರ್ ಅವರ ಅಂಗಡಿಯ ಬಾಗಿಲು ಮುರಿದು ಚಿಲ್ಲರೆ ಹಣ, ಸಿಗರೇಟ್ ಗಳನ್ನು ಎಗರಿಸಿದ್ದಾರೆ.ಇನ್ನೂ ಅದರ ಮುಂಭಾಗದ ಕಟ್ಟಡದಲ್ಲಿರುವ ಹರಿಪ್ರಸಾದ್ ಸವರ ಶ್ರೀ ದುರ್ಗಾ ರಾಜ್ ಅಟೋ ಮೊಬೈಲ್ಸ್, ಪ್ರವೀಣ್ ಹಾಗೂ ತ್ಯಾಗರಾಜ್ ಅವರ ಭಗವತಿ ಟ್ರೇಡರ್ಸ್ ಹಾಗೂ ಪೆಟ್ರೋಲ್ ಪಂಪ್ ಬಳಿ ಇರುವ ಬಾಲಕೃಷ್ಣ ರೈ ಅವರ ಸವಿರುಚಿ ಚಿಕನ್ ಸೆಂಟರ್ ಅವರ ಅಂಗಡಿಗೂ ನುಗ್ಗಿದ ಕಳ್ಳರು ಅಲ್ಲಿಯೂ ಹಣಕ್ಕಾಗಿ ಹುಡುಕಾಟ ನಡೆಸಿದ್ದು, ಯಾನು ಸಿಗದ ಕಾರಣ ಬರಿಗೈಯಲ್ಲಿ ಹಿಂತಿರುಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ, ಪರಿಶೀಲನೆ ನಡೆಸಿದರು.

Related posts

Leave a Reply

Your email address will not be published. Required fields are marked *