Header Ads
Breaking News

ವಿಟ್ಲ ಪಾಥರ್ಂಪಾಡಿ ಜಟಾಧಾರಿ ದೈವಸ್ಥಾನ ವಿಶೇಷ ಪ್ರಾರ್ಥನೆಯ ಮಹಿಮೆ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ ಅರಮನೆಯಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವಿಟ್ಲ ಪಾಥರ್ಂಪಾಡಿ ಜಟಾಧಾರಿ ದೈವಸ್ಥಾನದಲ್ಲಿ ಏಪ್ರಿಲ್ 7 ರಂದು ನಡೆಯಲಿರುವ ವಿಶೇಷ ಪ್ರಾರ್ಥನೆಯ ಮಹಿಮೆ ಸೇವೆಯ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಬೆಳಿಗ್ಗೆ ನಾಗತಂಬಿಲ ಸಂಜೆ ಕುಡಾಲು ಬಾಡೂರು ಕೂಡುಕಟ್ಟಿನ ಬಾಡೂರು ಚಾವಡಿಯಿಂದ ಶ್ರೀ ಜಟಾಧಾರಿ ದೈವದ ಭಂಡಾರ ಆಗಮಿಸಿಲಿದೆ. ಬಳಿಕ ರಾತ್ರಿ ಅನ್ನ ಸಂತಾರ್ಪಣೆ, ಬಳಿಕ ರಾಜನ್ ದೈವ ಗುಳಿಗನಿಗೆ ಕೋಲ ಸೇವೆ ನಡೆಯಲಿದೆ.ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ರಾತ್ರಿ ಜಟಾಧಾರಿ ದೈವದ ಭಂಡಾರ ಮೈಮೆಗದ್ದೆಗೆ ಆಗಮಿಸಿ ಮೈಮೆ ನಡೆಯಲಿದೆ. ಇದರ ಪ್ರಯುಕ್ತ ಬಂಗಾರು ಅರಸರು ವಿಟ್ಲ ಅರಮನೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ವಿ ಸದಾಶಿವ ವಿಟ್ಲ ಅರಮನೆ, ವಿ ನರಸಿಂಹ ವರ್ಮ ಅರಮನೆ, ಶ್ರೀಕಂಠ ವರ್ಮ ಅರಮನೆ, ಜಯರಾಮ್ ಬಲ್ಲಾಳ್ ವಿಟ್ಲ ಅರಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಕೆ, ಕಾರ್ಯಾಧ್ಯಕ್ಷ ಬಾಬು ಕೊಪ್ಪಳ, ಉಪಾಧ್ಯಕ್ಷ ಲಕ್ಷ್ಮಣ್ ಆರ್ ಎಸ್, ಕಾರ್ಯದರ್ಶಿ ಶೈಲೇಶ್, ನಾರಾಯಣ ನಾವಡ, ಕೋಶಾಧಿಕಾರಿ ಪ್ರಭಾಕರ್ ಶೆಟ್ಟಿ, ಶ್ರೀಕಾಶಿ ಯುವಕ ಮಂಡಲದ ಅಧ್ಯಕ್ಷ ದಿವಾಕರ, ಮಾಜಿ ಅಧ್ಯಕ್ಷ ಕೇಶವ ವಿ.ಕೆ, ಕಾರ್ಯದರ್ಶಿ ಮನೋಜ್, ಹರೀಶ್ ಕಾಶಿಮಠ, ದಿಪಿನ್, ರಾಘವ, ಯೋಗೀಶ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *