Header Ads
Breaking News

ವಿಟ್ಲ-ಪುಚ್ಚಗುತ್ತು ಶ್ರೀ ಬ್ರಹ್ಮ ಮುಗೇರ ದೈವಗಳು,ಶ್ರೀ ಕೊರಗಜ್ಜ ದೈವ, ಪರಿವಾರ ದೈವಗಳ : ಪುನರ್ ಪ್ರತಿಷ್ಠಾ ಕಲಶೋತ್ಸವ

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪುಚ್ಚಗುತ್ತು ಶ್ರೀ ಬ್ರಹ್ಮ ಮುಗೇರ ದೈವಗಳು, ಶ್ರೀ ಕೊರಗಜ್ಜ ದೈವ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಸ್ಥಾನ ಪ್ರದಾನ, ಪುನರ್ ಪ್ರತಿಷ್ಟಾ ಕಲಶೋತ್ಸವ ಫೆ.14ರಿಂದ ಫೆ.16ರ ವರೆಗೆ ನಡೆಯಲಿದ್ದು, ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿದೆ.

ಬಂಟ್ವಾಳ ತಾಲೂಕು ವಿಟ್ಲ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ದೇವರು ನೆಲೆಸಿರುವ ವಿಟ್ಲ ಸೀಮೆಯ ಪ್ರಕೃತಿಯ ಮಡಿಲಲ್ಲಿ ಅಡಿಕೆ, ತೆಂಗು, ಭತ್ತ ವಿವಿಧ ಜಾತಿಯ ಮರಮಟ್ಟು ಮೊದಲಾದ ಬೆಳೆಗಳ ವನಸಿರಿ ಸೊಬಗಿನ ನಡುವೆ ದೇವರು, ದೈವಗಳು ನೆಲೆಸಿರುವ ಪುಣ್ಯ ಭೂಮಿ. ಪುಚ್ಚಗುತ್ತು ಜೋಗಿಬೆಟ್ಟು ಇಲ್ಲಿ ಇತಿಹಾಸ ಪೂರ್ವದಲ್ಲಿಯೇ ಶ್ರೀ ಬ್ರಹ್ಮಮೊಗೇರ ದೈವಗಳ ಆರಾಧನೆ ನಡೆದು ಬಂದಿರುತ್ತದೆ ಎಂಬುದು ದೈವಗಳ ಆಯುಧ ಪರಿಕರಾಧಿಗಳಿಂದ ವೈದ್ಯವಾಗುತ್ತದೆ.

ವಿಟ್ಲ ಸೀಮೆಯ ಹಿಂದಿನ ಅರಸು ಮನೆತನದ ಅರಸು ದೊಂಬ ಹೆಗ್ಗಡೆಯವರು ದೇವರು ದೈವಗಳ ಭಕ್ತರಾಗಿದ್ದು, ಪುಚ್ಚಗುತ್ತು ಸುತ್ತಮುತ್ತ ನೆಲೆಸಿರುವ ಮೊಗೇರ ಬಂಧುಗಳಿಗೆ ಶ್ರೀ ಬ್ರಹ್ಮ ಮೊಗೇರ ದೈವಗಳನ್ನು ಆರಾಧಿಸಿಕೊಂಡು ಬರಲು ಆಗಿನ ಕಾಲದ ಬಿಲ್ಲವ ಮುಖಂಡರಲ್ಲಿ ದೈವಗಳಿಗೆ ಮಂಜ ಪೂಜೆ ನಡೆಸಲು ಶ್ರೀ ದೈವಗಳ ಆಯುಧ ಪರಿಕರಗಳನ್ನು ಮಾಡಿಸಿಕೊಟ್ಟಿದ್ದರು. ಎಂಬ ವಿಚಾರ ಹಿರಿಯರಿಂದ ತಿಳಿದು ಬಂದಿದೆ. ಈ ಆಯುಧಗಳಿಗೆ ಪ್ರತಿವರ್ಷವೂ ಮಂಜ ಪೂಜೆಯೂ ಸಮಾಜದ ಎಲ್ಲಾ ಬಂಧು ಬಾಂಧವರ ಸಮ್ಮುಖದಲ್ಲಿ ಪುಚ್ಚಗುತ್ತು ಎಂಬಲ್ಲಿ ಒಂದು ಹಲಸಿನ ಮರದಡಿಯಲ್ಲಿ ನಡೆಯುತ್ತಿತ್ತು.

ಈ ಪೂಜೆಯನ್ನು ಊರಿನ ಗುರಿಕಾರರಾದ ಜೋಗಿಬೆಟ್ಟು ದಿವಂಗತ ಅಮ್ಮು ಪೂಜಾರಿಯವರು ಬಂದು ನಡೆಸಿಕೊಡುತ್ತಿದ್ದರು. ಅವರ ನಂತರ ಅವರ ಮಗ ದಿ.ಮೈಂದ ಪೂಜಾರಿಯವರು ನಡೆಸುತ್ತಿದ್ದರು. ಅವರ ಜತೆಯಲ್ಲಿ ಗೋಳಿತ್ತಡಿ ದಿ. ಪುತ್ತು ಪೂಜಾರಿಯವರು ಭಾಗವಹಿಸುತ್ತಿದ್ದರು. ಈ ಮಂಜ ಪೂಜೆಯಿಂದ ಊರಿನಲ್ಲಿ ಬೆಳೆದ ಭತ್ತ, ತೆಂಗು, ಅಡಿಕೆ, ಮತ್ತು ಇತರ ಕೃಷಿಗಳಿಗೆ ಬರುವ ರೋಗ ರುಜಿನಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಸುಮಾರು ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿರುವ ಮೊಗೇರ ಬಂಧುಗಳ ಮನೆಗಳಲ್ಲಿ ಬೇಯಿಸಿದ ಭತ್ತ ಮೊಳಕೆಯೊಡೆಯುವುದು ಕಾಣಿಸಿಕೊಂಡಿತ್ತು. ಈ ಬಗ್ಗೆ ಗ್ರಾಮದ ಹಿರಿಯರಲ್ಲಿ ತಿಳಿಸಿದಾಗ ಪ್ರಶ್ನೆಯನ್ನು ಪ್ರಶ್ನೆಯನ್ನು ಕೇಳಿ ತಿಳಿದುಕೊಂಡಂತೆ ಸಲಹೆ ಕೊಟ್ಟಿದ್ದರು. ಪ್ರಶ್ನೆಯಲ್ಲಿ ಕೇಳಿದಾಗ ಮೊಗೇರ ದೈವಗಳು ಬೇಯಿಸಿದ ಭತ್ತದಲ್ಲಿ ಉದ್ಭವವಾಗಿರುತ್ತದೆ. ಹಾಗೂ ಇಲ್ಲಿ ನೆಲೆಯಾಗಲು ಬಯಸುತ್ತಾರೆ. ದೈವಗಳಿಗೆ ದೈವಸ್ಥಾನ ನಿರ್ಮಿಸಿ ನೇಮೋತ್ಸವ ಜರುಗಿಸಬೇಕೆಂದು ಕಂಡು ಬಂದಿದೆ.
ಅಷ್ಟಮಂಗಳ ಚಿಂತನೆಯಲ್ಲಿ ಶ್ರೀ ಬ್ರಹ್ಮಮೊಗೇರ ದೈವಗಳ ದೈವಸ್ಥಾನ ನಿರ್ಮಾಣ, ಶ್ರೀ ಬ್ರಹ್ಮ ದೇವರ ಗುಡಿ ನಿರ್ಮಾಣ, ಶ್ರೀ ಕೊರಗಜ್ಜ ದೈವದ ದೈವಸ್ಥಾನ ನಿರ್ಮಾಣ, ನೀರಿಗಾಗಿ ಒಂದು ಬಾವಿ, ಗುಳಿಗ ದೈವಕ್ಕೆ ಗುಳಿಗನ ಕಟ್ಟೆ ಕಟ್ಟಿ ಸ್ಥಾಮನೆ ಮಾಡುವುದು ಕಂಡು ಬಂದಿದ್ದು, ಅದರಂತೆ ಈ ಎಲ್ಲಾ ಕಾರ್ಯಗಳು ನಡೆದಿದೆ. ಸ್ಥಳೀಯ ಸಂಘಸಂಸ್ಥೆಗಳು, ಯುವಕರು ಹಗಲಿರುಳು ಶ್ರಮದಾನಗಳ ಮೂಲಕ ವಿವಿಧ ಕಾರ್ಯಗಳನ್ನು ನಡೆಸುತ್ತಿದ್ದಾರೆ.

ಫೆ.14ರಂದು ಸುದರ್ಶನ ಹೋಮ, ಬಾದ್ದಾಕರ್ಷಣೆ, ಸುದರ್ಶನ ಬಲಿ, ರಾಕ್ಷೋಘ ಹೋಮ, ವಾಸ್ತುಹೋಮ ನಡೆಯಲಿದೆ. ಫೆ.15ರಂದು ಬೆಳಿಗ್ಗೆ 8.29ರಿಂದ 9.12ರ ಮೀನ ಲಗ್ನದಲ್ಲಿ ಶ್ರೀ ಗುರುಪ್ರಸಾದ್ ಬಡಕ್ಕಿಲ್ಲಾಯರ ನೇತೃತ್ವದಲ್ಲಿ ದೈವಗಳ ಪ್ರತಿಷ್ಠೆ. ಕಲಶಾಭಿಷೇಕ, ತಂಬಿಲ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ, ರಾತ್ರಿ ಬ್ರಹ್ಮ ಮುಗೇರ ದೈವಗಳ ನೇಮೋತ್ಸವ ನಡೆಯಲಿದೆ.ಫೆ.16ರಂದು ಬೆಳಿಗ್ಗೆ ಕೊರಗ ತನಿಯ ದೈವದ ನೇಮ, ಗುಳಿಗ ದೈವದ ನೇಮ, ಪಂಜುರ್ಲಿ, ಕಲ್ಲುರ್ಟಿ ನೇಮೋತ್ಸವ ನಡೆಯಲಿದೆ. ಫೆ. 15ರಂದು ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳ ನೇರಪ್ರಸಾರ ವಿ4 ನ್ಯೂಸ್ ಯ್ಯೂಟ್ಯೂಬ್‍ನಲ್ಲಿ ಪ್ರಸಾರಗೊಳ್ಳಲಿದೆ.

Related posts

Leave a Reply

Your email address will not be published. Required fields are marked *