Header Ads
Header Ads
Header Ads
Breaking News

ವಿಟ್ಲ ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಕ್ರೈಸ್ತ ಬಾಂಧವರಿಂದ ತೆನೆಹಬ್ಬ ಆಚರಣೆ

ವಿಟ್ಲದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ತೆನೆಹಬ್ಬವನ್ನು ಕ್ರೈಸ್ತ ಬಾಂಧವರು ಬಾರೀ ಸಡಗರದಲ್ಲಿ ಆಚರಿಸಿದರು. ಬೆಳಿಗ್ಗೆ ಪೆರುವಾಯಿ ಧರ್ಮ ಕೇಂದ್ರ ವಿವಿಧ ಘಟಕಗಳಿಂದ ನೂರಾರು ಭಕ್ತರು ಚರ್ಚ್‌ಗೆ ಆಗಮಿಸಿದರು. ಚರ್ಚ್‌ನ ಧರ್ಮ ಗುರು ವಿಶಾಲ್ ಮೋನಿಸ್ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಅವರ ಮಾರ್ಗದರ್ಶನದಂತೆ ಕ್ರೈಸ್ತ ಭಾಂಧವರು ಮೇರಿ ಮಾತೆಗೆ ಹೂ ಅರ್ಪಣೆ ಮಾಡಿದರು. ಅಲ್ಲಿಂದ ಮೆರವಣಿಗೆ ಮೂಲಕ ಚರ್ಚ್‌ನ ಒಳಂಗಣಕ್ಕೆ ತೆರಳಿ ಬಳಿಕ ಬಲಿ ಪೂಜೆ ನಡೆಯಿತು. ಈ ದಿನ ನಮಗೆ ಸಂತೋಷದ ದಿನವಾಗಿದೆ. ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಮನೆಯಲ್ಲಿ ಕುಟುಂಬ ಸಹಿತ ತೆನೆ ಹಬ್ಬ ಆಚರಿಸುತ್ತೇವೆ. ಬಳಿಕ ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡುತ್ತೇವೆ ಇದುವೇ ತೆನೆ ಹಬ್ಬದ ವಿಶೇಷತೆಗಳು ಎಂದು ಭಕ್ತ ಹಾಗೂ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ ಸೋಜ ಹೇಳುತ್ತಾರೆ.

Related posts

Leave a Reply