Header Ads
Header Ads
Breaking News

ವಿಟ್ಲ ಪ.ಪಂ. ಬಿಜೆಪಿ ಆಡಳಿತದಿಂದ ಮನೆ ತೆರಿಗೆ ಏರಿಕೆ ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷ ರಮಾನಾಥ ಆರೋಪ

ವಿಟ್ಲ ಪಟ್ಟಣ ಪಂಚಾಯಿತಿ ಬಿಜೆಪಿ ಆಡಳಿತ ಮನೆ ತೆರಿಗೆಯನ್ನು ಅವೈಜ್ಞಾನಿಕವಾಗಿ ಏರಿಸಿ ಸರ್ವಾಧಿಕಾರಿ ಮನೋಭಾವ ಪ್ರದರ್ಶಿಸಿದೆ ಎಂದು ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಆರೋಪಿಸಿದ್ದಾರೆ.ಅವರು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಜಾರಿಗೆ ತಂದ ತೆರಿಗೆ ಪದ್ಧತಿ ಅವೈಜ್ಞಾನಿಕವಾಗಿದೆ. ವ್ಯಾಪಾರಿಗಳಿಗೆ ತೆರಿಗೆಯನ್ನು ಶೇ.50ರಿಂದ 60 ರಷ್ಟು ಇಳಿಸಲಾಗಿದೆ. ಮನೆತೆರಿಗೆ ಜಾಸ್ತಿಯಾಗಿದೆ. ಬಡವರಿಗೆ ಭಾರಿ ಹೊಡೆತ ನೀಡಿದಂತಾಗಿದೆ ಎಂದರು. ತಾನು ಗ್ರಾಮ ಪಂಚಾಯತ್ ಅಧ್ಯಕ್ಷನಾಗಿದ್ದಾಗ ವ್ಯಾಪಾರಿ ಕಟ್ಟಡಗಳಿಗೆ ಹೆಚ್ಚು ಕರ ವಿಧಿಸಲಾಗಿತ್ತು. ಜನವಸತಿ ಕಟ್ಟಡಗಳಿಗೆ ಕಡಿಮೆ ಕರ ನಿಗದಿಪಡಿಸಲಾಗಿತ್ತು. ಇದನ್ನು ವಿರೋಧಿಸಿದ ಬಿಜೆಪಿಯು ಕೇವಲ ವ್ಯಾಪಾರೀ ಸಮುದಾಯವನ್ನು ತೃಪ್ತಿಪಡಿಸುತ್ತಿದೆ. ವಾಸಿಸುವ ಮನೆಗೆ 2017ರ ಜನವರಿ ತಿಂಗಳಲ್ಲಿ ವಿಧಿಸಿದ ತೆರಿಗೆ 366 ರೂ. ಮತ್ತು ಅಕ್ಟೋಬರ್ ತಿಂಗಳಲ್ಲಿ ವಿಧಿಸಿದ ತೆರಿಗೆ 429 ರೂ. ಈ ದಾಖಲೆಯನ್ನು ನೀಡಿರುವುದು ಪಟ್ಟಣ ಪಂಚಾಯಿತಿ ತೆರಿಗೆ ರಶೀದಿ. ಅದೇ ರೀತಿ ಹಲವರಿಗೆ ನೀಡಿದ ತೆರಿಗೆ ದರವು ತರಾತುರಿಯ ನಿರ್ಧಾರವಾಗಿದೆ ಎಂದು ಅವರು ದೂರಿದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಮಾಜಿ ಸದಸ್ಯರಾದ ಅಬ್ದುಲ್ ರಹಿಮಾನ್ ಕುರುಂಬಳ ಮತ್ತು ವಸಂತ ಶೆಟ್ಟಿ ಕೂಡೂರು ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts