Header Ads
Header Ads
Header Ads
Breaking News

ವಿಟ್ಲ ಪ.ಪಂ. ಸಾಮಾನ್ಯ ಸಭೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕ್ರಮ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ

ವಿಟ್ಲ: ವ್ಯಾಪಾರಿಗಳು ಪರವಾನಿಗೆ ನವೀಕರಿಸದಿರುವ ಬಗ್ಗೆ ಕ್ರಮಕೈಗೊಳ್ಳಲಾಗಿದೆ. ಆ ಬಗ್ಗೆ ಎಲ್ಲ ಅಂಗಡಿಗಳಿಗೆ ಅಧಿಕಾರಿ ವರ್ಗದವರು ಭೇಟಿ ಮಾಡಿ ಕ್ರಮಕೈಗೊಳ್ಳಲು ಆರಂಭಿಸಿದ್ದಾರೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆಯೂ ಕ್ರಮಕೈಗೊಳ್ಳಲಾಗಿದೆ. ವಿಟ್ಲ ಪೇಟೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಬಗ್ಗೆ ವಿಟ್ಲ ಠಾಣಾಧಿಕಾರಿ ಜತೆ ವಿಶೇಷ ಸಭೆ ಕರೆಯಲು ಕಳೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅವರ ಜತೆ ಮಾತುಕತೆ ಮಾಡಲಾಗಿದೆ ಎಂದು ಅಧ್ಯಕ್ಷ ಅರುಣ್ ಎಂ. ವಿಟ್ಲ ಹೇಳಿದರು.

ವಿಟ್ಲ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಸದಸ್ಯ ರವಿಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿ, ಮಾತನಾಡಿದರು.  ನವಗ್ರಾಮ ಮತ್ತು ಇತರ ಕಡೆಗಳಲ್ಲಿ ಫಲಾನುಭವಿಗಳಿಗೆ ವಿತರಿಸಿದ ನಿವೇಶನ ಮತ್ತು ಮನೆಯಲ್ಲಿ ವಾಸ್ತವ್ಯವಿಲ್ಲದೇ ಬೇರೆಯವರು ವಾಸಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡುವ ಬಗ್ಗೆ ಮತ್ತೆ ವಿಶೇಷವಾಗಿ ಚರ್ಚೆ ನಡೆಯಿತು. ಗೋಮಾಳ, ಮದಕ, ಸರಕಾರಿ ಜಾಗಗಳ ಗುರುತಿಸುವಿಕೆ ಬಗ್ಗೆ ಕಂದಾಯ ಇಲಾಖೆ ಸಹಕಾರ ನೀಡದೇ ಇದ್ದರೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಈ ಬಾರಿ ಸಾಮಾನ್ಯ ಸಭೆಯಲ್ಲಿ ಗ್ರಾಮಕರಣಿಕ ಪ್ರಕಾಶ್ ಅವರನ್ನು ಸಭೆಗೆ ಆಹ್ವಾನಿಸಿ ಆ ಬಗ್ಗೆ ಚರ್ಚಿಸಲಾಯಿತು.

ಸದಸ್ಯ ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ರಾಮದಾಸ ಶೆಣೈ, ಲೋಕನಾಥ ಶೆಟ್ಟಿ ಕೊಲ್ಯ, ಸದಸ್ಯ ಶ್ರೀಕೃಷ್ಣ, ಅಬ್ಬೋಕರೆ ವಿ., ಇಂದಿರಾ ಅಡ್ಡಾಳಿ, ಸಂಧ್ಯಾ ಮೋಹನ್, ಗೀತಾ ಪುರಂದರ, ಲತಾ ಅಶೋಕ್ ಪೂಜಾರಿ, ಜಯಂತ್, ಮಂಜುನಾಥ ಕಲ್ಲಕಟ್ಟ, ಉಷಾ ಕೃಷ್ಣಪ್ಪ, ಚಂದ್ರಕಾಂತಿ ಶೆಟ್ಟಿ, ಸುನಿತಾ ಕೋಟ್ಯಾನ್, ದಮಯಂತಿ, ನಾಮನಿರ್ದೇಶಿತ ಸದಸ್ಯರಾದ ಭವಾನಿ ರೈ ಕೊಲ್ಯ, ವಿ.ಎಚ್.ಸಮೀರ್ ಪಳಿಕೆ, ಪ್ರಭಾಕರ ಭಟ್ ಮಾವೆ, ಪ್ರಭಾರ ಅಽಕಾರಿ ಲಲನಾ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಕಿರಿಯ ಅಭಿಯಂತರ ಶ್ರೀಧರ ನಾಯ್ಕ, ರತ್ನಾವತಿ ಭಾಗವಹಿಸಿದ್ದರು.

Related posts

Leave a Reply