Header Ads
Header Ads
Header Ads
Breaking News

ವಿಟ್ಲ ಭಾಗದಲ್ಲಿ ಭಾರೀ ಮಳೆ ಕನ್ಯಾನದ ಕೆಳಗಿನ ಪೇಟೆಯ ರಸ್ತೆಯಲ್ಲಿ ನಿಂತ ನೀರು ವಾಹನ ಸವಾರರ ಪರದಾಟ

ವಿಟ್ಲ: ವಿಟ್ಲ ಭಾಗದಲ್ಲಿ ಸುರಿದ ಬಾರೀ ಮಳೆಗೆ ಕನ್ಯಾನ ಗ್ರಾಮದ ಕೆಳಗಿನಪೇಟೆ ಎಂಬಲ್ಲಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಚಾಲಕರು ಪರದಾಡಿದರು.ನಿನ್ನೆ ರಾತ್ರಿಯಿಂದಲೆ ನಿರಂತರವಾಗಿ ಮಳೆ ಸುರಿಯುತ್ತಿತ್ತು. ಕನ್ಯಾನ ಗ್ರಾಮದ ಕೆಳಗಿನಪೇಟೆ-ಶಿರಂಕಲ್ಲು ರಸ್ತೆಯಲ್ಲಿ ಮಳೆ ನೀರು ಸರಿಯಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲವಾಗಿದ್ದರಿಂದ ರಸ್ತೆಯಲ್ಲಿಯೇ ನೀರು ನಿಂತಿದೆ. ಇದರಿಂದ ಆಟೋ ರಿಕ್ಷಾ, ದ್ವಿಚಕ್ರ ಮೊದಲಾದ ವಾಹನಗಳು ಸಂಚರಿಸಲು ಅದರ ಚಾಲಕರು ಹರಸಾಹಸಪಡುವಂತಾಗಿದೆ.

ಈ ರಸ್ತೆಯೂ ಕೆಳಗಿನಪೇಟೆಯಿಂದ ಶಿರಂಕಲ್ಲು, ಪೆರುವಾಯಿ, ಮಾಣಿಲ ಕ್ಷೇತ್ರವನ್ನು ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ಸಾವಿರಾರು ಸಂಚಾರ ಮಡುತ್ತಿದ್ದಾರೆ. ಅದಲ್ಲದೇ ಶ್ರೀಧಾಮ ಮಾಣಿಲ, ಶ್ರೀ ಒಡಿಯೂರು ಹಾಗೂ ಕಣಿಯೂರು ಕ್ಷೇತ್ರವನ್ನು ಸಂಪರ್ಕಿಸಲು ಈ ರಸ್ತೆ ಹೆಚ್ಚು ಉಪಯೋಗವಾಗುತ್ತಿದೆ. ಮಳೆ ಬಂದರೆ ಸಾಕು ಪ್ರತಿಸಲವೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಈ ಬಾರಿಯ ಪ್ರತಿಯೊಂದು ಬಾರೀ ಮಳೆಗೆ ಇದೇ ರೀತಿಯ ಪರಿಸ್ಥಿತಿ ಎದುರಾಗಿದೆ.

ಈ ಬಗ್ಗೆ ಕನ್ಯಾನ ಗ್ರಾಮ ಪಂಚಾಯತ್ ಗಮನಕ್ಕೆ ತಂದರೂ ಕೇವಲ ಆರೈಕೆಯ ಉತ್ತರಗಳನ್ನು ಮಾತ್ರ ನೀಡುತ್ತಿದ್ದಾರೆ ಹೊರತು ಯಾವುದೇ ಕಾಮಗಾರಿ ನಡೆಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply