Header Ads
Header Ads
Breaking News

ವಿಟ್ಲ ಭಾಗದ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ

ವಿಟ್ಲ ಭಾಗದ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಭಾರೀ ಸಡಗರದಲ್ಲಿ ಆಚರಿಸಲಾಯಿತು. ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ಧರ್ಮಗುರು ಜೋಕಿನ್ ಫರ್ನಾಂಡಿಸ್, ವಿಶಾಲ್ ಮೋನಿಸ್ ನೇತೃತ್ವದಲ್ಲಿ ಬಲಿ ಪೂಜೆ ನೆರವೇರಿಸಲಾಯಿತು.
ವಿಟ್ಲ ಭಾಗದ ಪೆರುವಾಯಿ, ವಿಜಯಡ್ಕ, ದೇಲಂತಬೆಟ್ಟು, ವಿಟ್ಲ, ಸಾಲೆತ್ತೂರು ಪರಿಸರದ ಚರ್ಚ್‌ಗಳಲ್ಲಿ ಕ್ರಿಸ್ ಹಬ್ಬವನ್ನು ಆಚರಿಸಲಾಯಿತು.
ಬಳಿಕ ಮುಚ್ಚಿರಪದವುನಿಂದ ಪೆರುವಾಯಿ ಜಂಕ್ಷನ್ ವರೆಗೆ ಶಾಂತಕ್ಲಾಸ್ ಮೆರವಣಿಗೆ ಸಾಗಿದೆ.

ರಸ್ತೆಯೂದ್ದಕ್ಕೂ ಕ್ರೈಸ್ತ ಬಾಂಧವರು ಅನ್ಯಧರ್ಮಿಯರಿಗೆ ಕೇಕ್ ವಿತರಿಸಿದರು. ಬಸ್ಸಿನಲ್ಲಿ ಸಂಚಾರ ಮಾಡುತ್ತಿದ್ದ ಪ್ರಯಾಣಿಕರಿಗೂ ಕೇಕ್ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಕ್ರೈಸ್ತರ ಈ ಹಬ್ಬ ಸೌಹಾರ್ದತೆಯ ಸಂದೇಶ ಸಾರಿದರು. ವಿಟ್ಲದ ಶೋಕಾಮಾತೆಯ ಚರ್ಚ್‌ನಲ್ಲಿ ಫಾ. ಎರಿಕ್ ಕ್ರಾಸ್ತಾ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Related posts

Leave a Reply