Header Ads
Header Ads
Breaking News

ವಿಟ್ಲ ಮಹತೋಭಾರ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಜಾತ್ರೋತ್ಸವ ಜ.14 ರಿಂದ 22 ರ ವರೆಗೆ ವಿವಿಧ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ವಿಟ್ಲ ಅರಮನೆಯ ಕೃಷ್ಣಯ್ಯ ಮಾಹಿತಿ

ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೋತ್ಸವ ಜ.14 ರಂದು ಧ್ವಜಾರೋಹಣಗೊಂಡು ಜ.22 ರವರೆಗೆ ವಿವಿಧ ಉತ್ಸವ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ವಿಶೇಷವಾಗಿ ಜ.14 ರಂದು ಹೊರೆಕಾಣಿಕೆ, ಭಜನೆ ಉಲ್ಪೆ ಮೆರವಣಿಗೆ ಆಗಮಿಸಲಿದೆ ಎಂದು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಹೇಳಿದರು.

ಅವರು ಗುರುವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜ.14 ರಂದು 10 ಗಂಟೆಗೆ ಧ್ವಜಾರೋಹಣ ನೆರವೇರಿ, ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಹೊರೆಕಾಣಿಕೆ ಸಂಗ್ರಹಿಸಿ, ಸಂಜೆ 5 ಗಂಟೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಸೀಮೆಯ ಪ್ರತಿ ಮನೆಯಿಂದ, ಫಲವಸ್ತುಗಳ ಜತೆಯಲ್ಲಿ ಹೊರೆಕಾಣಿಕೆಯಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಬಸದಿಯಿಂದ ಭಜನಾ ಉಲ್ಪೆ ಮೆರವಣಿಗೆ ಹೊರಡಲಿದೆ. ರಾತ್ರಿ 8.30 ರಿಂದ ಲಕ್ಷದೀಪೋತ್ಸವ ನಡೆಯಲಿದ್ದು ಭಕ್ತಾದಿಗಳು 5 ಹಣತೆಗಳೊಂದಿಗೆ ಆಗಮಿಸಿ ದೇವಾಲಯದ ಸುತ್ತ ಹಣತೆ ಹಚ್ಚಿ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಜ.15, 16, 17 ರಂದು ಸಂಜೆ 6.30 ಕ್ಕೆ ನಿತ್ಯೋತ್ಸವ ನಡೆಯಲಿದ್ದು, ಜ.18 ರಂದು ರಾತ್ರಿ 8.30 ಕ್ಕೆ ಕೇಪುನಿಂದ ಶ್ರೀ ಮಲರಾಯ ದೈವದ ಭಂಡಾರ ಬರಲಿದೆ. 6 ಕ್ಕೆ ಬಯ್ಯದ ಬಲಿ ಉತ್ಸವ ನಡೆಯಲಿದೆ. ಜ.19 ರಂದು ಬೆಳಗ್ಗೆ 9 30 ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ೮ಕ್ಕೆ ನಡು ದೀಪೋತ್ಸವ ನಡೆಯಲಿದ್ದು, ವಿಶೇಷವಾಗಿ ಕೆರೆ ಆಯನ-ತೆಪ್ಪೋತ್ಸವ ನಡೆಯಲಿದೆ.

ಜ.20 ರಂದು ಬೆಳಗ್ಗೆ ೫ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 9 ಕ್ಕೆ ಹೂತೇರು ನಡೆಯಲಿದೆ. ಜ. 21 ರಂದು ಬೆಳಗ್ಗೆ ದರ್ಶನ ಬಲಿ, ರಾಜಾಂಗಣದ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 7.30 ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರುವುದು, ರಾತ್ರಿ ೮ಕ್ಕೆ ಮಹಾ ರಥೋತ್ಸವ, ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.

ಜ.22 ರಂದು ಬೆಳಗ್ಗೆ 9 ಗಂಟೆಗೆ ಕವಟೋದ್ಘಾಟನೆ, ಮಹಾಪೂಜೆ, ಕಾಲಾವಧಿ ಬಟ್ಟಲು ಕಾಣಿಕೆ, ತುಲಾಭಾರ ಸೇವೆ, ರಾತ್ರಿ 10 ಕ್ಕೆ ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ, ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ.

ಜ.24 ರಂದು ಮಧ್ಯಾಹ್ನ 1 ಗಂಟೆಗೆ ದೇವಸ್ಥಾನದ ಎದುರು ಕೇಪುವಿನ ಶ್ರೀ ಮಲರಾಯಿ ದೈವಕ್ಕೆ ನೇಮೋತ್ಸವ ನಡೆಯಲಿದೆ. ಜ.25 ಕ್ಕೆ ಮಧ್ಯಾಹ್ನ 2 ಗಂಟೆಗೆ ಅರಮನೆಯಲ್ಲಿ ನೇಮೋತ್ಸವ ಬಳಿಕ ಕೇಪಿಗೆ ಭಂಡಾರ ಹೊರಡುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಕ್ತ ವೃಂದದ ಆನಂದ ಕಲ್ಲಕಟ್ಟ, ವಿಟ್ಲ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಮದಾಸ ಶೆಣೈ, ಶೀನಪ್ಪ ನಾಯ್ಕ, ಜಯರಾಮ ಕುಂಟ್ರಕಳ, ಮೊದಲಾದವರು ಉಪಸ್ಥಿತರಿದ್ದರು.