Header Ads
Header Ads
Breaking News

ವಿಟ್ಲ: ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ, ವಿಠೋಬ ರುಕ್ಮಯಿ, ನಾಗದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಧರ್ಮ ಸಭೆ

ವಿಟ್ಲ: ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ, ವಿಠೋಬ ರುಕ್ಮಯಿ, ನಾಗದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಧರ್ಮ ಸಭೆ ನಡೆಯಿತು. 

ಈ ಸಂದರ್ಭ ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಪರಸ್ಪರ ಪ್ರೀತಿಯಿರಬೇಕು. ನೀತಿ, ಆಚಾರ, ವಿಚಾರಗಳು ಸಮಾಜವನ್ನು ಸುಸ್ಥಿತಿಯಲ್ಲಿಡುತ್ತವೆ. ಸತ್ಕರ್ಮದಿಂದ ಸತಲ ಸಿಗುತ್ತದೆ. ಆತ್ಮಸಾಕ್ಷಿಗೆ ವಿರುದ್ಧವಾದ ನಡವಳಿಕೆ ಅಪಾಯಕಾರಿ. ಉತ್ಕೃಷ್ಟವಾದ ಮೌಲ್ಯ ಉಳಿಯಬೇಕು. ಎಂದು ನುಡಿದರು.ಕಟೀಲು ದೇಗುಲದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಅವರು ಮಾತನಾಡಿ, ಮಾಣಿಲ ಶ್ರೀಧಾಮದಲ್ಲಿ ಮಾಣಿಲ ಶ್ರೀಗಳ ನೇತೃತ್ವದಲ್ಲಿ ಯಜ್ಞ, ಯಾಗಾದಿಗಳು ನಡೆಯುತ್ತಿವೆ. ಅದರ ಫಲ ಶ್ರೇಷ್ಠವಾದುದು. ಯೋಗ ಭಾಗ್ಯವನ್ನು ಕೂಡಿರುತ್ತದೆ. ದೇವರು, ಸಂತರು ದೇಶದ ರಕ್ಷಣೆಯನ್ನು ಮಾಡುತ್ತಾರೆ ಎಂದು ನುಡಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕರಿಂಜೆ ಶ್ರೀ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ಕರುಣಿಸಿದ್ದರು.ಅಳಪೆ ಸತ್ಸಂಗ ಸಮಿತಿ ಅಧ್ಯಕ್ಷ ವಾಸುದೇವ ಆರ್.ಕೊಟ್ಟಾರಿ ಧಾರ್ಮಿಕ ಉಪನ್ಯಾಸ ನೀಡಿದರು. ವಿಶೇಷ ಅಭ್ಯಾಗತರಾಗಿ ಸೌಂದರ್ಯ ರಮೇಶ್, ದಿವಾಕರದಾಸ್ ನೇರ್ಲಾಜೆ, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಸುಣ್ಣಂಬಳ, ಟ್ರಸ್ಟಿ ಚಂದ್ರಶೇಖರ, ಟ್ರಸ್ಟಿ ಮಚ್ಚೇಂದ್ರ ಸಾಲ್ಯಾನ್, ಟ್ರಸ್ಟಿ ಪುರುಷೋತ್ತಮ ಚೇಂಡ್ಲ, ಟ್ರಸ್ಟಿ ತಾರಾನಾಥ ಕೊಟ್ಟಾರಿ, ಟ್ರಸ್ಟಿ ಮಂಜು ವಿಟ್ಲ, ಮಹಿಳಾ ಸೇವಾ ಸಮಿತಿ ಸದಸ್ಯೆ ವಸಂತಿ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *