Header Ads
Header Ads
Header Ads
Breaking News

ವಿಟ್ಲ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ ವಿಶಿಷ್ಟ ಸಾಧನೆಗೈದ ಸಾಧಕರಿಗೆ ಸನ್ಮಾನ

ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರದಲ್ಲಿ ವಿಶಿಷ್ಟ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಯನ್ನು ಅಭಿವೃದ್ಧಿ ಪಡಿಸಲು ಕೈಜೋಡಿಸಿದ ಪ್ರಭಾರ ಮುಖ್ಯ ಶಿಕ್ಷಕ ಲೋಕನಾಥ, ಕಳೆದ 15 ವರ್ಷಗಳಿಂದ ಎನ್‌ಎಸ್‌ಎಸ್ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಅಣ್ಣಪ್ಪ ಸಾಸ್ತಾನ ಹಾಗೂ ಸುಚೇತನ್ ಜೈನ್ ಅವರನ್ನು ಈ ಸಂದರ್ಭ ಶಾಶ್ವತ ಯೋಜನಾ ಸಂಯೋಜಕ ಅಧಿಕಾರಿ ಬಾಬು ಕೊಪ್ಪಳ ಅವರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಎನ್‌ಎಸ್‌ಎಸ್ ಶಿಬಿರದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಸಂಸ್ಥೆಯ ಕೋಶಾಧಿಕಾರಿ ಎಂ ನಿತ್ಯಾನಂದ ನಾಯಕ್, ಪ್ರಕಾಶ್, ಭಾಸ್ಕರ್ ಶೆಟ್ಟಿ, ಸೋಮಶೇಖರ್, ರಾಜಶೇಖರ್, ಜೈ ಕಿಶನ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply