Header Ads
Header Ads
Breaking News

ವಿಟ್ಲ ರೋಟರಿ ಕ್ಲಬ್‌ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

 ವಿಟ್ಲ ರೋಟರಿ ಕ್ಲಬ್‌ಗೆ ರೋಟರಿ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮ ವಿಟ್ಲದ ಬೊಬ್ಬೆಕೇರಿಯ ಗಜಾನನ ಸಭಾಭವನದಲ್ಲಿ ನಡೆಯಿತು.

ಬೆಳಿಗ್ಗೆ ವಿಟ್ಲದ ಬೊಬ್ಬೇಕೇರಿಯಲ್ಲಿ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಜೋಸಫ್ ಮ್ಯಾಥ್ಯು ಅವರನ್ನು ಸ್ವಾಗತಿಸಲಾಯಿತು. ಬಳಿಕ ವಿಟ್ಲದ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರೋಟರಿ ಕ್ಲಬ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಸಂಜೆ ಗಜಾನನ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ನೊಂದ ವ್ಯಕ್ತಿಯೊಬ್ಬರ ಕಥೆಯಿಂದ ಸಂಧ್ಯಾ ಸುರಕ್ಷಾ ಕಾರ್ಯಕ್ರಮವನ್ನು ಹಾಕಿಕೋಳ್ಳಲು ಪ್ರೇರಣೆಯಾಯಿತು. ನಾವು ಕಲಿತ ಶಾಲೆಗಳನ್ನು ಸದಾ ನೆನಪಿನಲ್ಲಿಡುವ ಕಾರ್ಯ ನಡೆಯಬೇಕು. ನಿಸ್ವಾರ್ಥ ಸೇವೆಯಿಂದ ಭಗವಂತ ಸಂಪ್ರೀತನಾಗುತ್ತಾನೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳಲು ರೋಟರಿ ಕ್ಲಬ್ ಪ್ರೇರಣೆಯಾಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಿಂದ ನಮ್ಮನ್ನು ಜೀವನದಲ್ಲಿ ನಾವು ಬದಲಾಯಿಸಿಕೊಂಡಿದ್ದೇವೆ. ಸಮಾಜಕ್ಕೆ ಸೇವೆ ಮಾಡಿದ ಬಗ್ಗೆ ನಮಗೆ ಹೆಮ್ಮೆಯಿದೆ ಎಂದರು.

ಡಾ. ಚರಣ್ ಕಜೆ ಅವರು ಕನ್ಯಾನ ಭಾರತ ಸೇವಾಶ್ರಮಕ್ಕೆ 12 ಸಾವಿರವನ್ನು ಕನ್ಯಾನ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಅವರಿಗೆ ಹಾಗೂ ಮೇಗಿನಪೇಟೆ ಅಂಗನವಾಡಿಗೆ ಗ್ರಿಲ್ ಅಳವಡಿಸುವ ನಿಟ್ಟಿನಲ್ಲಿ 5 ಸಾವಿರವನ್ನು ಶಿಕ್ಷಕಿ ಸರಸ್ವತಿ ಅವರಿಗೆ ನೀಡಿದರು. ಡಾ. ವಿ. ಕೆ. ಹೆಗಡೆ ಆಶ್ರಮ ನಿವಾಸಿಗಳಿಗೆ ಸೀರೆ ವಿತರಣೆ ಮಾಡಿದರು. ಅಡ್ಯನಡ್ಕ ಜನತಾ ಕಾಲೇಜಿಗೆ ಕಂಪ್ಯೂಟರ್, ಒಡಿಯೂರು ಗುರುದೇವ ವಿದ್ಯಾಪೀಠಕ್ಕೆ ಟೇಬಲ್, ಕಪಾಟು, ಕುರ್ಚಿ, ಟೇಬಲ್ ಅನ್ನು ನೀಡಲಾಯಿತು.
ಟಿ ಆರ್ ಎಫ್ ಫಂಡನ್ನು ವಸಂತ ಶೆಟ್ಟಿ ಅವರು ಗವರ್ನರ್‌ಗೆ ಹಸ್ತಾಂತರ ಮಾಡಿದರು. ನಿಕಟಪೂರ್ವ ಅಧ್ಯಕ್ಷ ಡಾ. ಚರಣ್ ಕಜೆ ಅವರಿಗೆ ಪಿಎಚ್‌ಎಫ್ ಫಿನ್ ತೊಡಿಸಲಾಯಿತು. ಪ್ರವೀಣ್ ಸಿ, ಸೋಮಶೇಖರ್ ಹಾಗೂ ರಾಧಾಕೃಷ್ಣ ಎರುಂಬು ಅವರು ನೂತವಾಗಿ ರೋಟರಿ ಕ್ಲಬ್ ಗೆ ಸೇರ್ಪಡೆಗೊಂಡರು. ರೋಟಾ ವಿಷನ್ ಅನ್ನು ಬಿಡುಗಡೆಗೊಳಿಸಲಾಯಿತು. ಕ್ಲೀಪರ್ಡ್ ವೇಗಸ್ ಅವರನ್ನು ಗೌರವಿಸಲಾಯಿತು.

ಸಹಾಯಕ ಗವರ್ನರ್ ರಿತೇಶ್ ಬಾಳಿಗ, ರೋಟರಿ ಕ್ಲಬ್‌ನ ವಲಯ ಸೇನಾನಿ ಸಂಜೀವ ಪೂಜಾರಿ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಧರ್ಣಪ್ಪ ಗೌಡ, ಅವಿಜ್ಞಾ ರೈ, ಕಾರ್ಯದರ್ಶಿ ಅಣ್ಣಪ್ಪ ಸಾಸ್ತಾನ, ನಿಯೋಜಿತ ಅಧ್ಯಕ್ಷ ಕೃಷ್ಣ ಭಟ್, ಪ್ರಕಾಶ್ ಹಾಗೂ ರಮೇಶ್ ಬಿ.ಕೆ, ದಿನೇಶ್, ರಶೀದ್ ವಿಟ್ಲ, ಡಾ. ರಮ್ಯ ಕಜೆ, ಕಿರಣ್ ಕುಮಾರ್ ಬ್ರಹ್ಮಾವರ, ಭಾಸ್ಕರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply

Your email address will not be published. Required fields are marked *