Header Ads
Header Ads
Breaking News

ವಿಟ್ಲ ರೋಟರಿ ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ ನೂತನ ಅಧ್ಯಕ್ಷರಾಗಿ ಡಾ. ಚರಣ್ ಕಜೆ ನೇಮಕ.

ವಿಟ್ಲ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಡಾ.ಚರಣ್ ಕಜೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲ ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಅದ್ಧೂರಿಯಾಗಿ ನಡೆಯಿತು.ನೂತನ ಅಧ್ಯಕ್ಷ ಡಾ.ಚರಣ್ ಕಜೆ ಅವರನ್ನು ಬ್ಯಾಂಡ್ ವಾದ್ಯಗಳ ಮೂಲಕ ವೇದಿಕೆಗೆ ಕರೆ ತರಲಾಯಿತು. ಅಧ್ಯಕ್ಷ ಸಂಜೀವ ಅವರು ಅಧಿಕಾರ ಹಸ್ತಾಂತರ ಮಾಡಿದರು. ಇದೇ ಸಂದರ್ಭ 2019-20ರಲ್ಲಿ ಲಯನ್ಸ್ ಗವರ್ನರ್ ಆಗಲಿರುವ ಡಾ.ಗೀತಪ್ರಕಾಶ್ ಹಾಗೂ ಡಾ.ಗಾಯತ್ರಿ ಜಿ.ಪ್ರಕಾಶ್ ಅವರನ್ನು ಗೌರವಿಸಿದರು. ಆಟ-ಪಾಠಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ವಿಟ್ಲದಲ್ಲಿ ಚಪ್ಪಲಿ ವ್ಯಾಪಾರ ಆರಂಭಿಸಿದ ಆನಂದ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಭಾರತಿ ಕಾಲೇಜಿಗೆ ಮತ್ತು ಎಂ.ಫ್ರೆಂಡ್ಸ್ ಸಂಸ್ಥೆಗೆ ದೇಣಿಗೆ ನೀಡಲಾಯಿತು. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಅಧ್ಯಕ್ಷ ಎಂ.ಸಂಜೀವ ಪೂಜಾರಿ ಮತ್ತು ಕಾರ್ಯದರ್ಶಿ ಪ್ರಕಾಶ್ ನಾಯಕ್ ಅವರನ್ನು ನೂತನ ಅಧ್ಯಕ್ಷರು ಸನ್ಮಾನಿಸಿದರು. ಶ್ಯಾಮ ಭಟ್, ಕ್ಲಿಫರ್ಡ್ ವೇಗಸ್, ಜಯರಾಮ್ ವಿಟ್ಲ ಅವರು ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.ಮುಖ್ಯ ಅತಿಥಿಯಾಗಿ ಜಿಲ್ಲೆಯ ಪೂರ್ವ ಗವರ್ನರ್ ಡಾ.ಕೆ.ರವಿ ಅಪ್ಪಾಜಿ ಅವರು ಭಾಗವಹಿಸಿ, ಪದಗ್ರಹಣ ನೆರವೇರಿಸಿ, ಮಾತನಾಡಿ, ರೋಟರಿ ಕ್ಲಬ್ ದೇಶ ವಿದೇಶಗಳಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಮಾಡುವ ಕಾರ್ಯಗಳಿಗೆ, ನೂತನ ಸಂಶೋಧನಾ ಕೇಂದ್ರಗಳನ್ನು ತೆರೆಯುವ ಕಾರ್ಯದಲ್ಲಿ ಮಹತ್ವದ ಸಾಧನೆ ಮಾಡಿದೆ. ನಾಯಕರಾದವರು ಇತರರನ್ನು ದೂಷಿಸದೇ ಸತ್ಕಾರ್ಯ, ಸೇವೆ ಮಾಡಬೇಕು ಎಂದರು.ನೂತನ ಅಧ್ಯಕ್ಷ ಡಾ.ಚರಣ್ ಕಜೆ ಅವರು ನಿಕಟಪೂರ್ವ ಅಧ್ಯಕ್ಷ ಎಂ.ಸಂಜೀವ ಪೂಜಾರಿ ಅವರಿಂದ ಅಧಿಕಾರ ಸ್ವೀಕರಿಸಿ, ಮಾತನಾಡಿ, ೧೦ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಇತ್ಯಾದಿ ಮೂಲಭೂತ ಆವಶ್ಯಕತೆಗಳಿಗೆ ಸ್ಪಂದಿಸಲಾಗುವುದು. ವೈದ್ಯಕೀಯ ಶಿಬಿರ ಆಯೋಜಿಸಲಾಗುವುದು. ವಿಟ್ಠಲ ಪಪೂ ಕಾಲೇಜಿನಲ್ಲಿ ಡಿಜಿಟಲ್ ಲೈಬ್ರೆರಿ ತೆರೆಯಲಾಗುವುದು ಎಂದು ತಿಳಿಸಿದರು.ಜೆನ್ ೪ರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್, ಜೋನ್ ಲೆಫ್ಟಿನೆಂಟ್ ಅಬ್ದುಲ್‌ರಹಿಮಾನ್, ಮಾತೃಸಂಸ್ಥೆ ಅಧ್ಯಕ್ಷ ಮನೋಹರ್, ಐಪಿಪಿ ವಸಂತ ಶೆಟ್ಟಿ, ಡಾ.ರಮ್ಯ ಕಜೆ, ಅಧ್ಯಕ್ಷ ಎಂ.ಸಂಜೀವ ಪೂಜಾರಿ, ಕಾರ್ಯದರ್ಶಿ ಸುಚೇತನ್ ಜೈನ್, ಪ್ರಕಾಶ್ ನಾಯಕ್, ಸದಸ್ಯರಾದ ಭಾಸ್ಕರ ಶೆಟ್ಟಿ, ಡಾ.ವಿ.ಕೆಹೆಗ್ಡೆ, ಪಿ.ಕೆ.ಶೆಟ್ಟಿ, ಬಾಬು ಕೆ.ವಿ., ಮೋಹನ ಎ., ಜಯರಾಮ ರೈ, ಶ್ರೀಕೃಷ್ಣ ಭಟ್, ಕಿರಣ್ ಕುಮಾರ್ ಬ್ರಹ್ಮಾವರ, ಬಾಲಕೃಷ್ಣ, ಅಶ್ರಫ್, ರವೀಶ್ ಶೆಟ್ಟಿ ಕರ್ಕಳ, ಹರೀಶ್ ಪೂಜಾರಿ, ರಶೀದ್ ವಿಟ್ಲ, ಡಿ.ಬಿ.ಅಬೂಬಕ್ಕರ್ ಉಪಸ್ಥಿತರಿದ್ದರು.

Related posts

Leave a Reply