
ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಬಂಟ್ವಾಳ ತಾಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ವಿಟ್ಲ ವಲಯ, ಮಂಗಳಪದವು ಐಡಿಯಲ್ ಪ್ಯೂಲ್ಸ್ ಸಹಯೋಗದಲ್ಲಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಅವರಿಂದ ರಕ್ತದಾನ ಶಿಬಿರ ಒಕ್ಕೆತ್ತೂರು ಸರ್ಕಾರಿ ಶಾಲೆಯಲ್ಲಿ ನಡೆಯಿತು. ಪ್ರಸ್ತುತ ರಕ್ತದಾನ ಎಲ್ಲೆಡೆ ನಡೆಯುತ್ತಿದೆ. ಅದರ ಅವಶ್ಯಕತೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ರಕ್ತ ನೀಡಿ ಇತರರ ಜೀವ ಉಳಿಸಲು ಉತ್ತೇಜಿಸುವ ನಿಟ್ಟಿನಲ್ಲಿ ಈ ಹೊಸ ಪ್ರಯೋಗವನ್ನು ಮಾಡಿದೆ. ಯುವಸಮೂಹ ಈ ಕಾರ್ಯದಲ್ಲಿ ಹೆಚ್ಚೆಚ್ಚು ತೊಡಗಿಸಲು ಯೋಜನೆ ರೂಪಿಸಿತ್ತು. ಪ್ರಥಮ 50 ರಕ್ತದಾನಿಗಳಿಗೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವ ಮೂಲಕ ಗಮನ ಸೆಳೆಯಿತು.
ಈ ಸಂದರ್ಭ ಮಾತನಾಡಿ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಡಾ.ಗೀತಾಪ್ರಕಾಶ್ ಅವರು ಲಯನ್ಸ್ ಕ್ಲಬ್ ನಿರಂತರ ಸೇವಾ ಚಟುವಟಿಕೆಗಳನ್ನು ನೀಡುತ್ತಾ ಬಂದಿದ್ದು, ವಿಟ್ಲ ಲಯನ್ಸ್ ಕ್ಲಬ್ ರಕ್ತದಾನ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದು ಜನರಿಗೆ ತುಂಬನೇ ಸಹಕಾರಿಯಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷೆ ಜೆಸಿಂತ ಮಸ್ಕರೇಂಞಸ್ ಮಾತನಾಡಿ ರಕ್ತದಾನಿಗಳನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ಉಚಿತ ಪೆಟ್ರೋಲ್ ಮತ್ತು ಡೀಸೆಲ್ ವಿತರಿಸಲಾಗುತ್ತಿದೆ. ಎಲ್ಲರ ಸಹಕಾರದಲ್ಲಿ ಲಯನ್ಸ್ ಕ್ಲಬ್ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಲಯನ್ಸ್ ಜಿಲ್ಲಾ ಮೆಡಿಕಲ್ ಶಿಬಿರ ಜಿಲ್ಲಾಧ್ಯಕ್ಷ ಇರ್ಮಾಡಿ ಶರಶ್ಚಂದ್ರ ಶೆಟ್ಟಿ, ಮಂಗಳೂರು ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ, ಒಕ್ಕೆತ್ತೂರು ಸರ್ಕಾರಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮಹಮ್ಮದ್ ಹಾರೀಸ್, ಶಾಲಾ ಮುಖ್ಯ ಶಿಕ್ಷಕ ಮುದರ ಬೈರ ಎಸ್, ಕೆಎಂಸಿಸಿ ಆಸ್ಪತ್ರೆಯ ಡಾ.ಸನ್ನಿಧಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಹರ್ಷಿತ್ ಕುಮಾರ್, ಖಜಾಂಜಿ ಭಾರತಿ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಲೂಯಿಸ್ ಮಸ್ಕರೇಂಞಸ್, ಜಯ ವಿ ರೈ, ಸುದೇಶ್ ಭಂಡಾರಿ, ಆದಂ ಮಂಗಳಪದವು, ಮೊಹಮ್ಮದ್ ಟಿ.ಕೆ, ಜಾಸ್ಮಿನ್ ಉಪಸ್ಥಿತರಿದ್ದರು.