Header Ads
Header Ads
Breaking News

ವಿಟ್ಲ ವಿಶ್ವಮಾತಾ ಗೋಮಾತಾ ನೃತ್ಯ ನಾಟಕ. 40ನೇ ಬಹುಮಾಧ್ಯಮ ಬಳಕೆಯ ವಿನೂತನ ಶೈಲಿಯ ಕಾರ್ಯಕ್ರಮ. ವಿಟ್ಲದ ವಿಠಲ ಪದವಿಪೂರ್ವ ಕಾಲೇಜು ರಂಗಮಂದಿರದಲ್ಲಿ ಆಯೋಜನೆ.

ವಿಟ್ಲದ ವಿಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ವಿಟ್ಲ ವಿಶ್ವಮಾತಾ ಗೋಮಾತಾ ಸಮಿತಿ ವತಿಯಿಂದ 40ನೇ ಬಹುಮಾಧ್ಯಮ ಬಳಕೆಯ ವಿನೂತನ ಶೈಲಿಯ ಅದ್ದೂರಿ ನೃತ್ಯ ನಾಟಕ ವಿಶ್ವ ಮಾತಾ ಗೋಮಾತಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಿನ್ನಿಗೋಳಿ ಶ್ರೀ ಶಕ್ತಿದರ್ಶನ ಯೋಗಾಶ್ರಮದ ಯೋಗಾಚಾರ್ಯ ದೇವಬಾಬಾ ಅವರು ದೇಸೀ ಗೋವನ್ನು ವಧಿಸುವುದೆಂದರೆ ಮಹಾಪುರುಷರ ಮೇಲೆ ದಾಳಿ ಮಾಡಿದ ಹಾಗೆ. ಮಕ್ಕಳನ್ನು ಪ್ರೀತಿಸುವವರು ವಿದೇಶಿ ಹಸುವಿನ ಹಾಲು ನೀಡುವುದಿಲ್ಲ. ಕೇರಳದಲ್ಲಿ ಶ್ರೀಕೃಷ್ಣನ ಗೋವು ಇಲ್ಲದ ಕಾರಣ ಹೆಚ್ಚು ರೋಗಗಳು ಪತ್ತೆಯಾಗುತ್ತಿದೆ. ಕಪಿಲ ಗೋವು ಜಗತ್ತಿನಲ್ಲಿ ಬಹಳಷ್ಟು ಶ್ರೇಷ್ಠವಾದ ಗೋವು. ಗೋವು ಇದ್ದಲ್ಲಿ ಮಾತ್ರ ಭಾರತ ಮಾತೆ ಇರಲು ಸಾಧ್ಯ ಎಂದು ಹೇಳಿದರು.ಮಂಗಳೂರು ಶ್ರೀ ವೈಕುಂಠಂ ಫಾರ್ಮ್ಸ್ ಬಂದರ್ ಕೆ. ಅನಂತ ಕಾಮತ್ ಮಾತನಾಡಿ ಜರ್ಸಿ – ಎಚ್ ಎಫ್ ಗೋವಿನ ಆಕಾರದ ಪ್ರಾಣಿ ಅಷ್ಟೇ. ಹಸುವಿನ ಎ1 ಹಾಲಿನಿಂದ ಕ್ಯಾನ್ಸರ್ ಸೇರಿ ವಿವಿಧ ರೋಗ ಬರುತ್ತಿದೆ. ನಮ್ಮ ಆರೋಗ್ಯ ವನ್ನು ನಾವೇ ಕಾಪಾಡಲು ದೇಸೀ ಗೋವಿನ ರಕ್ಷಣೆ ಮಾಡಬೇಕಾಗಿದೆ. 21ಲಕ್ಷಕೋಟಿ ರೂ ಗೋವಿನ ಬದಲಾವಣೆಯಿಂದ ದೇಶಕ್ಕೆ ನಷ್ಟ ವಾಗುತ್ತಿದ್ದು, ದೇಸೀ ಗೋಸಾಕಣೆಯಿಂದ ಇದನ್ನು ಉಳಿಸಬಹುದು ಎಂದರು.ಕಿನ್ನಿಗೋಳಿ ಶ್ರೀ ಶಕ್ತಿದರ್ಶನ ಯೋಗಾಶ್ರಮದ ಯೋಗಾಚಾರ್ಯ ದೇವಬಾಬಾ ಅವರು 40ನೇ ಬಹುಮಾಧ್ಯಮ ಬಳಕೆಯ ವಿನೂತನ ಶೈಲಿಯ ಅದ್ದೂರಿ ನೃತ್ಯ ನಾಟಕ ಪ್ರದರ್ಶನಗೊಂಡಿತು. ದೇಶೀಯ ಗೋವುಗಳ ಮಹತ್ವವನ್ನು ಪರದೆ ಮೂಲಕ ತೋರಿಸಲಾಯಿತು.ಕಾಲುನಡಿಗೆಯಲ್ಲಿ ವಿಶ್ವ ಪರ್ಯಟಿಸಿದ ಸೀತಾರಾಮ ಕೆದಿಲಾಯ, ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್ ಎನ್ ಕೂಡೂರು, ವಿಠಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ವಿಟ್ಲ ವಿಶ್ವಮಾತಾ ಗೋಮಾತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ, ಉಪಸ್ಥಿತರಿದ್ದರು.

Related posts

Leave a Reply