Header Ads
Header Ads
Breaking News

ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿಯವರಿಂದ ಸಾಂಸ್ಕೃತಿಕ ಸೌರಭ

ಬಂಟ್ವಾಳ : ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿಯವರಿಂದ ಸಾಂಸ್ಕೃತಿಕ ಸೌರಭವು ಬಂಟ್ವಾಳ ತಾಲೂಕಿನ ನರಿಕೊಂಬು ಮೊಗರ್ನಾಡ್ ಲಕ್ಷ್ಮೀ ನರಸಿಂಹ ದೇವಸ್ಥಾನದ ವಿಷ್ಣು ರಥೋತ್ಸವದ ಪ್ರಯುಕ್ತ ನರಿಕೊಂಬು ಯುವಕ ಮಂಡಲದ ವತಿಯಿಂದ ವಿಜೃಂಭಣೆಯಿಂದ ನಡೆಯಿತು.

ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿ ಅವರಿಂದ ನೃತ್ಯ ಹಾಗೂ ಜಗದೀಶ್ ಪುತ್ತೂರು ಅವರಿಂದ ನಡೆದ ಸಂಗೀತ ರಸಮಂಜರಿ ಗಮನ ಸೆಳೆಯಿತು. ನೃತ್ಯ ಪ್ರದರ್ಶನದಲ್ಲಿ ಸುಮಾರು 40 ಮಂದಿ ಭಾಗವಹಿಸಿದ್ದರು. ದೇಶ ಪ್ರೇಮ, ಜಾನಪದ, ಬ್ರೇಕ್ ಡ್ಯಾನ್ಸ್ ಆಕರ್ಷಣೆಗೆ ಕಾರಣವಾಗಿದೆ.
ರಜಮಂಜರಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕರಾದ ಪ್ರಕಾಶ್ ಮಹಾದೇವನ್, ರೂಪ ಪ್ರಕಾಶ್, ಸಿಯಾನ್ ಖಾನ್ ಕೇರಳ, ರಾಕೇಶ್ ಡಿಸ್ಲೆ, ವಿದ್ಯಾ ಸುವರ್ಣ, ತಮ್ಮ ಪ್ರತಿಭೆ ತೋರಿಸಿದರು. ಆರ್.ಜೆ ಪ್ರಸನ್ನ ಅವರ ನಿರೂಪಣೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಹಲವು ಚಲನ ಚಿತ್ರ ನಟ-ನಟಿಯರು ಭಾಗವಹಿಸಿದರು. ವಿಶಿಷ್ಟವಾಗಿ ನಿರೀಕ್ಷ ಶೆಟ್ಟಿ ಸೇರಿದಂತೆ ಬಲಿಪೆ ಹಾಗೂ ಎನ್ನ ಚಿತ್ರ ತಂಡ ಭಾಗವಹಿಸಿ ಪ್ರೇಕ್ಷಕರಿಗೆ ರಸದೌತನ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *