Header Ads
Header Ads
Breaking News

ವಿಟ್ಲ ಸರ್ಕಾರಿ ಶಾಲೆಯಲ್ಲಿ ತರಗತಿ ಕಟ್ಟಡವನ್ನು ಉದ್ಘಾಟನೆ

ವಿಟ್ಲ ಸರ್ಕಾರಿ ಶಾಲೆಯಲ್ಲಿ ಶಾಸಕರ ಸ್ಥಳೀಯ ಅಭಿವೃದ್ಧಿನಿಧಿಯಲ್ಲಿ ನಿರ್ಮಾಣಗೊಂಡ ತರಗತಿ ಕಟ್ಟಡವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ವಿಟ್ಲ ಸರ್ಕಾರಿ ಶಾಲೆ ಬಂಟ್ವಾಳ ತಾಲ್ಲೂಕಿಗೆ ಮಾದರಿಯಾಗಿದೆ. 20 ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಬಿಡುಗಡೆಗೊಂಡಿದೆ. ಎರಡು ಘಟಕವನ್ನು ಈ ಶಾಲೆಗೆ ನೀಡಲಾಗುವುದು ಎಂದು ತಿಳಿಸಿದರು.

ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಾಮ್‌ದಾಸ್ ಶೆಣೈ, ಸದಸ್ಯರಾದ ಶ್ರೀಕೃಷ್ಣ, ಉಷಾ ಕೃಷ್ಣಪ್ಪ, ಲೋಕನಾಥ ಶೆಟ್ಟಿ ಕೊಲ್ಯ, ಇಂದಿರಾ ಅಡ್ಯಾಳಿ, ಶಾಲಾ ಗೌರವಾಧ್ಯಕ್ಷ ಸುಬ್ರಯ ಪೈ, ಎಸ್‌ಡಿಎಂಸಿ ಅಧ್ಯಕ್ಷ ಸಮೀರ್ ಪಳಿಕೆ, ಮಾಜಿ ಅಧ್ಯಕ್ಷರಾದ ಕೃಷ್ಣಯ್ಯ ಕೆ, ಜಗನ್ನಾಥ್ ಕಾಸರಗೋಡು, ಚಂದಳಿಕೆ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಕುಳಾಲು, ಬಿಜೆಪಿ ಮುಖಂಡರಾದ ಮೋಹನದಾಸ ಉಕ್ಕುಡ, ಉದಯ ಆಲಂಗಾರು, ನರ್ಸಪ್ಪ, ವೀರಪ್ಪ ಗೌಡ, ಎಂಜಿನಿಯರ್ ರಾಘವೇಂದ್ರ ಪೈ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply