Header Ads
Header Ads
Breaking News

ವಿಟ್ಲ ಹೋಬಳಿಯ ಗ್ರಾಮಸ್ಥರಿಗೆ ಹಕ್ಕು ಪತ್ರ ವಿತರಣೆ ವಿಟ್ಲ ಅತಿಥಿಗೃಹದಲ್ಲಿ ಹಕ್ಕು ಪತ್ರ ವಿತರಿಸಿ ಶಾಸಕಿ ಶಕುಂತಳಾ ಶೆಟ್ಟಿ

ಪುತ್ತೂರು ವಿಧಾನ ಸಭಾ ಕ್ಷೇತ್ರದ ವಿಟ್ಲ ಹೋಬಲಿಯ ಗ್ರಾಮಸ್ಥರಿಗೆ ವಿಟ್ಲ ಅತಿಥಿಗೃಹದಲ್ಲಿ ಹಕ್ಕು ಪತ್ರ ವಿತರಿಸಲಾಯಿತು. ಇನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರು ಹಕ್ಕು ಪತ್ರ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ನೀಡಲಾಗಿದೆ.

ಎಂಟು ಸಾವಿರಕ್ಕಿಂತಲೂ ಅಧಿಕ ಹಕ್ಕು ಪತ್ರ ವಿತರಿಸಲಾಗಿದೆ. ನಾನು ಸ್ವಾರ್ಥಕ್ಕಾಗಿ ಏನೂ ಮಾಡಿಲ್ಲ. ಯಾವುದೇ ಬೇಧಭಾವ ಮಾಡದೇ ಪ್ರಮಾಣಿಕವಾಗಿ ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಹೇಳಿದರು.ಈ ವೇಳೆ ವಾಸು ನಾಯ್ಕ, ದಿನೇಶ್, ವಿಟ್ಲ ಕಂದಾಯ ನಿರೀಕ್ಷಕ ದಿವಕರ್, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply