Header Ads
Header Ads
Breaking News

ವಿಠಲ ಪಪೂ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ವಿಟ್ಲ ಜೇಸಿಐ 2019ರ ಪದಗ್ರಹಣ ಕಾರ್ಯಕ್ರಮ

ವಿಟ್ಲ: ವಿಟ್ಲ ಜೇಸಿಐ 2019ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶನಿವಾರ ವಿಟ್ಲದ ವಿಟ್ಠಲ ಪಪೂ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು. ನೂತನ ಅಧ್ಯಕ್ಷ ಬಾಲಕೃಷ್ಣ ವಿಟ್ಲ ಅವರಿಗೆ 2018ನೇ ಸಾಲಿನ ಅಧ್ಯಕ್ಷ ಸೋಮಶೇಖರ್ ಅವರು ಅಧಿಕಾರ ಹಸ್ತಾಂತರಿಸಿದರು. ಇದೇ ಸಂದರ್ಭ ಲಯನ್ಸ್ ಜಿಲ್ಲಾ 2020ರ ಗವರ್ನರ್ ಡಾ.ಗೀತಪ್ರಕಾಶ್ ಮತ್ತು ಜಿಲ್ಲಾ ಜಡ್ಜ್ ಶುಭವೀರ ಜೈನ್ ಅವರನ್ನು ಸನ್ಮಾನಿಸಲಾಯಿತು. ವಲಯ ಉಪಾಧ್ಯಕ್ಷ ರಾಯನ್ ಉದಯ ಕ್ರಾಸ್ತಾ ಅವರು ಪದಗ್ರಹಣ ನಡೆಸಿಕೊಟ್ಟರು. ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಜಿಲ್ಲಾ ಜಡ್ಜ್ ಶುಭವೀರ ಜೈನ್ ಭಾಗವಹಿಸಿ, ಮಾತನಾಡಿ, ಇಂದು ವ್ಯಾವಹಾರಿಕವಾದ ಚಟುವಟಿಕೆಗಳು ಹೆಚ್ಚಾಗಿ ಮಾನವೀಯ ಸಂಬಂಧ ಕುಸಿಯುತ್ತಿದೆ. ಜತೆಗೆ ಆಧುನಿಕ ತಂತ್ರಜ್ಞಾನಗಳ ಅತಿಯಾದ ಬಳಕೆ, ವ್ಯಾವಹಾರಿಕ ದೃಷ್ಟಿಕೋನದಿಂದ ಸಂಸ್ಕಾರ ಮತ್ತು ಸಂಸ್ಕೃತಿಗೂ ಧಕ್ಕೆಯಾಗಿದೆ. ಮಾನವೀಯ ಸಂಬಂಧ ಉಳಿಸಲು ಜೇಸಿಐ ಸಹಕಾರಿಯಾಗಿದೆ ಎಂದು ಹೇಳಿದರು.

ಜೇಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರು ಭಾಗವಹಿಸಿ, ಮಾತನಾಡಿ ಜೇಸಿ ಸಂಸ್ಥೆ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಜೇಸಿಐ ಬ್ಲಡ್ ಡೊನೇಶನ್ ವಲಯ ಸಂಯೋಜಕ ಬಾಬು ಕೆ.ವಿ., ಐಪಿಪಿ ರಮೇಶ್ ಬಿ.ಕೆ., ಜೇಸಿರೆಟ್ ಅಧ್ಯಕ್ಷೆ ಮಲ್ಲಿಕಾ ಬಿ.ಎಸ್., ಕಾರ್ಯದರ್ಶಿ ಸಂದೀಪ್, ಸಂತೋಷ್ ಶೆಟ್ಟಿ, ನವೀನ್ ಕುಮಾರ್ ವಿ.ಎನ್, ಜೆಜೆಸಿ ಅಧ್ಯಕ್ಷ ಸನತ್, ದಿನೇಶ್ ಶೆಟ್ಟಿ, ಪರಮೇಶ್ವರ ಹೆಗಡೆ, ಚಂದ್ರಹಾಸ ಶೆಟ್ಟಿ, ಚಂದ್ರಹಾಸ ಕೊಪ್ಪಳ ಹಾಗೂ ಎಲ್ಲ ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.

Related posts

Leave a Reply