

ಪುತ್ತೂರು : ತಾಲೂಕಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಯಲ್ಲಿ ವಿದ್ಯಾಗಮ ತರಗತಿ ಆರಂಭವಾಾಯಿತು.
ಶಾಲೆಗಳಿಗೆ 2020 ರ ಮಾರ್ಚ್ 3ನೇ ವಾರದಿಂದ ಕೋವಿಡ್-19 ಕಾರಣದಿಂದಾಗಿ ರಜೆ ನೀಡಿದ್ದು ಒಂಭತ್ತು ತಿಂಗಳು ಶಾಲೆಗಳು ಮಕ್ಕಲಿಲ್ಲದೆ ಖಾಲಿಯಾಗಿತ್ತು. ಇದೀಗ ಜನವರಿ 1 ರಂದು ವಿದ್ಯಾಗಮ ತರಗತಿ ಆರಂಭದಿಂದ ಮತ್ತೆ ಶಾಲೆಗಳಲ್ಲಿ ಮಕ್ಕಳ ಕಲರವ ಆರಂಭವಾಯಿತು.ಪುತ್ತೂರು ತಾಲೂಕಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಸ್ವಾಗತಿಸಲು ಸಾಕಷ್ಟು ಮುಂಜಾಗರೂಕತೆಯೊಂದಿಗೆ ತಯಾರಿ ನಡೆಸಲಾಯಿತು.
ಶಾಲಾ ಶಿಕ್ಷಕ ವೃಂದ,ಎಸ್.ಡಿ.ಎಂ.ಸಿ. ಪೋಷಕ ವೃಂದ, ಶಾಲಾ ಆವರಣ ಶುಚಿಗೊಳಿಸಿ ಸಮಾಜಿ ಕ ಅಂತರ ಕಾಯ್ದುಕೊಳ್ಳಲು ಸ್ಥಳ ಗುರುತಿಸುವಿಕೆ, ಥರ್ಮಲ್ ಸ್ಕಾನರ್,ಸ್ಯಾನಿಟೈಸರ್ ಮುಂತಾದ ಅಗತ್ಯ ಸಾಮಗ್ರಿಗಳನ್ನು ಮುಂಚಿತವಾಗಿಯೇ ಜೋಡಿಸಿಕೊಳ್ಳಲಾಯಿತು. ಶಾಲಾ ಅವರಣದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಮುಂಜಾಗರೂತ ಸೂಚನೆಗಳನ್ನು ಪ್ರದರ್ಶಿಸಲಾಯಿತು.
ಶಾಲೆಯಲ್ಲಿ ವಿದ್ಯಾಗಮ ಪ್ರಾರಂಭೋತ್ಸವವನ್ನು ನಗರ ಸಭಾ ಸದಸ್ಯರಾದ ಪ್ರೇಮಲತಾ .ಜಿ. ಇವರು ಮಕ್ಕಳ ಕೈಗೆ ಸ್ಯಾನಿಟೈಸರ್ ಹಾಕಿ ಶುಭ ಹಾರೈಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾದ ಶ್ರೀ ಕೃಷ್ಣನಾಯ್ಕ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಿಯಾ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ರಾಜೇಶ್ವರಿ ವಂದಿಸಿದರು.ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.