Header Ads
Header Ads
Breaking News

ವಿದ್ಯಾಭಾರತಿ ರಾಜ್ಯ ಮಟ್ಟದ ಅಂತರ್ ಶಾಲಾ ಈಜು ಸ್ಪರ್ಧೆಯಲ್ಲಿ ಪದಕಗಳನ್ನು ಮುಡಿಗೇರಿಸಿದ ವಿದ್ಯಾರ್ಥಿಗಳು

 

ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ವಿದ್ಯಾರ್ಥಿಗಳು ತಲಪಾಡಿಯ ವಿದ್ಯಾನಿಕೇತನದಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಅಂತರ್ ಶಾಲಾ ಈಜು ಸ್ಪರ್ಧೆಯಲ್ಲಿ ಪ್ರಶಸ್ತಿ ಹಾಗೂ ಪದಕಗಳನ್ನು ಪಡೆದು ವಿಜೇತರಾಗಿದ್ದಾರೆ.ಮಂಗಳೂರಿನಲ್ಲಿರುವ ಮಂಗಳಾ ಸ್ವಿಮಿಂಗ್ ಕ್ಲಬ್‌ನ ವಿದ್ಯಾರ್ಥಿಗಳು ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಮಿಂಚಿದ್ದಾರೆ. ಇದೀಗ ಮತ್ತೊಮ್ಮೆ ಇಲ್ಲಿನ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಹೌದು, ಸೆಪ್ಟೆಂಬರ್ 11 ರಂದು ತಲಪಾಡಿಯ ವಿದ್ಯಾನಿಕೇತನದಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಅಂತರ್ ಶಾಲಾ ಈಜು ಸ್ಪರ್ಧೆಯಲ್ಲಿ ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಆರು ವಿದ್ಯಾರ್ಥಿಗಳಾದ ಆರಾಧನಾ ಬೇಕಲ್, ಗಗನ್ ಜಿ ಪ್ರಭು, ಸ್ಟೀವ್ ಜೆಫ್ ಲೋಬೋ, ಆಯುಷ್ ಎಂಪಿ, ಭವಿಷ್, ವೈಷ್ಣವ್ ಶೆಣೈ, ಪ್ರಶಸ್ತಿಯನ್ನು ಪಡೆದ ವಿದ್ಯಾರ್ಥಿಗಳು.50 ಮೀಟರ್ ಬ್ರೆಸ್ಟ್ರ್ ಸ್ಟ್ರೋಕ್,100ಮೀಟರ್ ಬ್ರೆಸ್ಟ್ರ್ ಸ್ಟ್ರೋಕ್, 200 ಮೀಟರ್ ಬ್ರೆಸ್ಟ್ರ್ ಸ್ಟ್ರೋಕ್,
4100 ಮೀಟರ್ ಫ್ರೀ ಸ್ಟೈಲ್ ಮತ್ತು4100  ಮೀಟರ್ ಮೆಡ್ಲೆ ರಿಲೇಯಲ್ಲಿ ಆರಾಧನಾ ಬೇಕಲ್ ಪ್ರಥಮ ಸ್ಥಾನವನ್ನು ಗಳಿಸಿ ಒಟ್ಟು 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡು ವಿಜೇತರಾಗಿದ್ದಾರೆ. ಇನ್ನು ಗಗನ್ ಜಿ ಪ್ರಭು100 ಮೀಟರ್ ಬ್ರೆಸ್ಟ್ರ್ ಸ್ಟ್ರೋಕ್, 200 ಮೀಟರ್ ಐಎಂ, 4100  ಮೀಟರ್ ಫ್ರೀ ಸ್ಟೈಲ್ ಮತ್ತು 4100  ಮೆಡ್ಲೆ ರೆಲೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ೪ ಚಿನ್ನದ ಪದಕಗಳನ್ನು ಹಾಗೂ100 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ದ್ವಿತೀಯ ಸ್ಥಾನದಲ್ಲಿ ಬೆಳ್ಳಿಯ ಪದಕವನ್ನು ಗಳಿಸಿ ಒಟ್ಟು 5 ಪದಕಗಳನ್ನು ಪಡೆದಿರುತ್ತಾರೆ.ಇನ್ನು ಸ್ಟೀವ್ ಜೆಫ್ ಲೋಬೋ 50, 100ಹಾಗು 200 ಮೀಟರ್ ಬಟರ್‌ಫ್ಲೈ, 4100 ಮೀಟರ್ ಫ್ರೀ ಸ್ಟೈಲ್, 4100  ಮೀಟರ್ ಮೆಡ್ಲೆ ರಿಲೇ ಯಲ್ಲಿ ಒಟ್ಟು ೫ ಚಿನ್ನದ ಪದಕಗಳನ್ನು ಗೆದ್ದು ವಿಜೇತರಾಗಿದ್ದಾರೆ.ಇನ್ನು200 ಮೀಟರ್ ಬ್ರೆಸ್ಟ್ ಸ್ಟ್ರೋಕ್, 4100 ಮೀಟರ್ ಫ್ರೀ ಸ್ಟೈಲ್ ಮತ್ತು 4100  ಮೀಟರ್ ಮೆಡ್ಲೆ ರಿಲೇಯಲ್ಲಿ ಒಟ್ಟು 3 ಚಿನ್ನದ ಪದಕಗಳನ್ನು ಆಯುಶ್ ಎಂಪಿಯವರು ಪಡೆದಿದ್ದರೆ, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಹಾಗೂ 200 ಮೀಟರ್ ಐಎಂನಲ್ಲಿ 2 ಬೆಳ್ಳಿಯ ಪದಕಗಳನ್ನು ಪಡೆದುಕೊಳ್ಲೂವಲ್ಲಿ ಯಶಸ್ವಿಯಾಗಿದ್ದಾರೆ.ಇನ್ನು ಭವಿಷ್ 100 ಮೀಟರ್ ಫ್ರೀ ಸ್ಟೈಲ್, 4100  ಫ್ರೀ ಸ್ಟೈಲ್ ಮತ್ತು 4100 ಮೀಟರ್ ಮೆಡ್ಲೆ ರಿಲೇಯಲ್ಲಿ 3 ಚಿನ್ನದ ಪದಕಗಳನ್ನು ಗಳಿಸಿದರೆ,50 ಮೀಟರ್ ಬಟರ್ ಫ್ಲೈ ಮತ್ತು 200 ಮೀಟರ್ ಫ್ರೀ ಸ್ಟೈಲ್‌ನಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಗಳಿಸಿದ್ದಾರೆ.ಇನ್ನು ವೈಷ್ಣವ್ ಶೆಣೈ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಒಂದು ಬೆಳ್ಳಿಯ ಪದಕವನ್ನು ಪಡೆದು ವಿಜೇತರಾಗಿದ್ದಾರೆ.ತಲಪಾಡಿಯ ವಿದ್ಯಾನಿಕೇತನದಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಅಂತರ್ ಶಾಲಾ ಈಜು ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಈ ಆರೂ ವಿದ್ಯಾರ್ಥಿಗಳು ಮಂಗಳೂರಿನ ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಮುಖ್ಯ ತರಭೇತುದಾರರಾದ ಲೋಕ್ ರಾಜ್ ವಿಟ್ಲ ಮತ್ತು ಶಿವಾನಂದ ಗಟ್ಟಿಯವರಿಂದ ಮಂಗಳಾ ಸ್ವಿಮ್ಮಿಂಗ್ ಪೂಲ್ ಹಾಗೂ ಸಂತ ಅಲೋಷಿಯಸ್ ಈಜುಕೊಳದಿಂದ ತರಭೇತಿಯನ್ನು ಪಡೆಯುತ್ತಿದ್ದಾರೆ,

Related posts

Leave a Reply