Header Ads
Header Ads
Breaking News

ವಿದ್ಯಾಭಿವರ್ಧಕ ಸಂಘ ಮಾಣಿ ಆಶ್ರಯದಲ್ಲಿ ಶಾಲೆಗೆ ನೂತನ ಕೊಠಡಿ

ಬಂಟ್ಬಾಳ: ವಿದ್ಯಾಭಿವರ್ದಕ ಸಂಘ ಮಾಣಿ ಇದರ ಆಶ್ರಯದಲ್ಲಿ ಕರ್ನಾಟಕ ಪ್ರೌಢಶಾಲೆಗೆ ಬಂಟ್ವಾಳ ರೋಟರಿ ಕ್ಲಬ್‌ನ ಸಹಕಾರದೊಂದಿಗೆ ನಿರ್ಮಾಣಗೊಂಡ ಆಂಗ್ಲಮಾಧ್ಯಮ ವಿಭಾಗದ ನೂತನ ಕೊಠಡಿಗಳ ಸಂಕೀರ್ಣದ ಉದ್ಘಾಟನಾ ಸಮಾರಂಭ ನಡೆಯಿತು. ರೋಟರಿಯ ನಿಯೋಜಿತ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ನೂತನ ಕಟ್ಟಡಗಳ ಸಂಕೀರ್ಣವನ್ನು ಉದ್ಘಾಟಿಸಿದರು.

ಅವರು ಮಾತನಾಡಿ ವಿದ್ಯಾಥಿಗಳ ಅನುಕೂಲಕಕಾಗಿ ಶಾಲೆಗೆ ಕಟ್ಟವನ್ನು ಒದಗಿಸಿಕೊಡುವುದು ಶ್ರೇಷ್ಟವಾದ ಕಾರ್ಯ. ವ್ಯಕ್ತಿಗೆ ವಿದ್ಯೆಯಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಉತ್ತಮ ನಡವಳಿಕೆಯೊಂದಿಗೆ ಶಿಕ್ಷಣ ಮುನ್ನಡೆಸಿದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ದೀಪ ಪ್ರಜ್ವಲಿಸಿದರು. ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಅಕ್ಷರ ಜ್ಞಾನಿಯಾಗಬೇಕು, ಎಲ್ಲರಿಗೂ ಮಾಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ಸಿಗಬೇಕು. ಸಾಮಾಜಿಕ ನ್ಯಾಯದಿಂದ ವಂಚಿತರಾವರಿಗೂ ಶಿಕ್ಷಣ ನೀಡಿ ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಇಂದು ಖುಷಿಯ ದಿನ, ಬಂಟ್ವಾಳ ರೋಟರಿ ಕ್ಲಬ್ ಸುವರ್ಣ ವರ್ಷದ ಯೋಜನೆಯಾಗಿ ಈ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು. ವಿದ್ಯೆಗೆ ಮೊದಲ ಪ್ರಾಶಸ್ಯ ರೋಟರಿ ಸಂಸ್ಥೆ ನೀಡುತ್ತಿದೆ. ಅಂಗನವಾಡಿ ಸಶಕ್ತೀಕರಣ, ಶುದ್ದ ಕುಡಿಯುವ ನೀರಿನ ಯೋಜನೆ ಮೂಲಕ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಬಂಟ್ವಾಳ ರೋಟರಿ ಕ್ಲಬ್ ಮಾಡಿದೆ ಎಂದರು. ಮಂಜುನಾಥ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಅಭಿವೃದ್ಧಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.
ರೋಟರಿ ಸುವರ್ಣ ವರ್ಷಾಚರಣೆ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಾಯಾಜಿ, ಕಾರ್ಯದರ್ಶಿ ಶಿವಾನಿ ಬಾಳಿಗ, ಹೈಕೋರ್ಟ್ ನ್ಯಾಯವಾದಿ
ಸುಧಾಕರ ಪೈ ಎಂ, ಬಿಎಸ್‌ಎನ್‌ಎಲ್‌ನ ಸಹಾಯಕ ಜನರಲ್ ಮ್ಯಾನೇಜರ್ ಜನಾರ್ದನ ಪೂಜಾರಿ, ವೇದಿಕೆಯಲ್ಲಿದ್ದರು.

Related posts

Leave a Reply

Your email address will not be published. Required fields are marked *