Header Ads
Header Ads
Header Ads
Breaking News

ವಿದ್ಯಾರ್ಥಿಗಳಿಂದ ಶಾಲೆಯ ಶಿಕ್ಷಕರ ವಿರುದ್ಧ ಪ್ರತಿಭಟನೆ ವಿದ್ಯಾರ್ಥಿಗಳಿಗೆ ಮನಸ್ಸೊ ಇಚ್ಚೆ ತಳಿಸಿದ ಶಾಲೆಯ ಪ್ರಿನ್ಸಿಪಾಲ್ ಕುಂದಾಪುರದ ತೆಕ್ಕಟ್ಟೆ ಶಾಲೆಯಲ್ಲಿ ನಡೆದ ಘಟನೆ

ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಕರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆಂದು ಶಾಲೆಯ ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ಮನಸೋ ಇಚ್ಚೆ ತಳಿಸಿದ ಪರಿಣಾಮ ವಿದ್ಯಾರ್ಥಿಯೋರ್ವ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ತೆಕ್ಕಟ್ಟೆಯ ಪ್ರತಿಷ್ಟಿತ ಶಾಲೆಯಲ್ಲಿ ನಡೆದಿದೆ.
ತೆಕ್ಕಟ್ಟೆ ಸಮೀಪದ ವಿಶ್ವವಿನಾಯಕ ನ್ಯಾಶನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ೪ನೇ ತರಗತಿಯ ವಿದ್ಯಾರ್ಥಿಗಳು ಓರ್ವ ಶಿಕ್ಷಕಿಯ ಪಾಠ ಪ್ರವಚನ ಸರಿಯಾಗಿಲ್ಲ, ಈ ಹಿನ್ನೆಲೆ ಅವರ ಬದಲಿಗೆ ಬೇರೆಯವರನ್ನ ನೇಮಿಸಿ ಎಂದು ಪ್ರತಿಭಟನೆಯನ್ನು ಸೆ.೬ರಂದು ನಡೆಸಿದ್ದರು ಎಂದು ತಿಳಿದು ಬಂದಿದೆ. ಆದ್ದರಿಂದ ಶಾಲೆಯ ಪ್ರಾಂಶುಪಾಲ ಆಗಸ್ಟಿನ್ ಸೆ.೭ರಂದು ಮಧ್ಯಾಹ್ನ ಶಿಕ್ಷಕಿಯೊಂದಿಗೆ ತರಗತಿಗೆ ಬಂದು ವಿಚಾರಣೆ ನಡೆಸಿದ್ದಾರೆ.

  ಈ ಸಂಧರ್ಭ ವಿದ್ಯಾರ್ಥಿಗಳು ನಮಗೆ ಆ ಶಿಕ್ಷಕಿ ಬೇಡವೆಂದು, ಅವರ ಪಾಠ ನಮಗೆ ಅರ್ಥವಾಗುತ್ತಿಲ್ಲವೆಂದು ಪ್ರಾಂಶುಪಾಲರಿಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಆಕ್ರೋಶಿತರಾದ ಪ್ರಾಂಶುಪಾಲ ಅಗಸ್ಟಿನ್ ಎಲ್ಲಾ ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೇ ಕೇಳುವಂತೆ ಕೂಡ ಈ ಸಂದರ್ಭ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಆದೇಶಿಸಿದ್ದಾರೆ ಈ ಘಟನೆಯಲ್ಲಿ ತೆಕಟ್ಟೆ ನಿವಾಸಿ ಬರ್ಕತ್ ಉಲ್ಲಾರವರ ಈ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಮಹಮದ್ ಬಾಸಿನ್(೯) ಆಘಾತಕ್ಕೊಳಗಾಗಿದ್ದು, ಮನೆಗೆ ಬಂದ ಬಳಿಕ ಚಳಿ ಜ್ವರ ಶುರುವಾಗಿದೆ. ಇದರಿಂದ ಆತಂಕಿತರಾದ ಪೋಷಕರು, ವಿಚಾರಿಸಿದಾಗ ಈ ಘಟನೆ ಬಗ್ಗೆ ಮಗು ಬಾಯ್ಬಿಟ್ಟಿದ್ದಾನೆ. ತಕ್ಷಣ ಬಾಸಿನ್‌ನನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿಯನ್ನ ಪರೀಕ್ಷಿಸಿದ ವೈದ್ಯರು, ವಿದ್ಯಾರ್ಥಿಯ ಹೊಡೆತಪರಿಣಾಮ ವಿದ್ಯಾರ್ಥಿಯ ಕೈಯ ನರದ ಬಳಿ ರಕ್ತ ಹೆಪ್ಪುಗಟ್ಟಿದ್ದು, ಇದಕ್ಕೆ ವೈದ್ಯರು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಸೂಚಿಸಿದ್ದಾರೆ. ಈ ಘಟನೆ ಕುರಿತು ವರದಿಯಾದ ಬಳಿಕ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾನಾಗ್ ಮತ್ತು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಸ್ಪತ್ರೆಗೆ ಬಂದು ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿದ್ದಾರೆ. ಕೋಟ ಠಾಣಾ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

Related posts

Leave a Reply