Header Ads
Header Ads
Breaking News

ವಿದ್ಯಾರ್ಥಿಗಳಿಗೆ ಭರಪೂರ ಮನರಂಜನೆ ಒದಗಿಸಿದ ಪ್ರಕೃತಿ ಮತ್ತು ಸಂಸ್ಕೃತಿ ಅಧ್ಯಯನ ಶಿಬಿರ

ಒಂದು ಕಡೆ ನದಿ ದಡದಲ್ಲಿ ಕೂತು ಮೀನಿಗೆ ಗಾಳ ಹಾಕುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತೊಂದು ಕಡೆ ನದಿ ಬದಿಯಲ್ಲಿ ಕೂತು ಪ್ರಕೃತಿಯ ಚಿತ್ರ ಬಿಡಿಸುವ ಪೂರ ಪೂರಿಯರು ಇದೇನು ಕಾಲೇಜು ಬಂಕ್ ಹೊಡೆದು ಕಾಲಹರಣ ಮಾಡುತ್ತಿದ್ದಾರೆ ಎಂದೆನಿಸಿದರೆ ನಿಮ್ಮ ಊಹೆ ತಪ್ಪು ಅಲ್ಲಿ ನಡೆದದ್ದಾರೂ ಏನು ಈ ಬಗ್ಗೆ ಒಂದು ಪುಲ್ ಡಿಟೇಲ್ಸ್ ನೋಡಿ.ಅದು ಹಚ್ಚ ಹಸಿರಿನ ಕೃಷಿ ಭೂಮಿ, ಈ ಭೂಮಿಗೆ ಅಶ್ರಯದಾತೆಯಾಗಿ ಸಮೀಪವೇ ಮೈದುಂಬಿ ಹರಿಯುವ ನಂದಿನಿ ನದಿ, ನದಿ ದಡದಲ್ಲಿ ಮೀನು ಹಿಡಿಯಲು ಅತೀ ಉತ್ಸಾಹದಿಂದ ಗಾಳ ಹಾಕುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಹೌದು ಇದು ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪದ ಪಾವಂಜೆ ಎಂಬ ಪುಟ್ಟ ಗ್ರಾಮದ ಪಾವಂಜೆ ರಾಮಪ್ಪ ಪೂಜಾರಿ ಕಟ್ಟಪುಣಿಯಲ್ಲಿ ಪಾವಂಜೆಯ ಅಗೋಳಿ ಮಂಜಣ ಜಾನಪದ ಕೇಂದ್ರ, ಹಳೆಯಂಗಡಿ ಲಯನ್ಸ್ ಕ್ಲಬ್, ಸುರತ್ಕಲ್ ಗೋವಿಂದದಾಸ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಕೃತಿ ಮತ್ತು ಸಂಸ್ಕೃತಿ ಎಂಬ ಅಧ್ಯಯನ ಶಿಬಿರ, ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಈ ಮೀನು ಮತ್ತು ಏಡಿ ಹಿಡಿಯುವ ಬಗ್ಗೆ ಗ್ರಾಮದ ಹಿರಿಯರ ಬಗ್ಗೆ ತರಭೇತಿ ಪಡೆದರು. ಗಾಳ ಎಂದರೆ ಏನು ಅದನ್ನು ಹೇಗೆ ತಯಾರಿಸಲಾಗುತ್ತದೆ, ಗಾಳಕ್ಕೆ ಮೀನು ಹೇಗೆ ಬರುತ್ತದೆ ಎಂಭಿತ್ಯಾದಿಗಳ ಬಗ್ಗೆ ಈ ಶಿಬಿರದಲ್ಲಿ ಮಾಹಿತಿ ಪಡೆದರು. ಅಲ್ಲದೆ ವಿದ್ಯಾರ್ಥಿಗಳಿಗಾಗಿ ಪ್ರಕೃತಿ ಚಿತ್ರಕಲಾ ಸ್ಪರ್ಧೆಯನ್ನು ಸ್ಪ್ರರ್ದೆಯನ್ನು ಆಯೋಜಿಸಲಾಗಿದ್ದು ನದಿಯ ದಡ ಕಟ್ಟಪುಣಿಗಳಲ್ಲಿ ವಿದ್ಯಾರ್ಥಿ ವಿಧ್ಯಾರ್ಥಿನಿಯರು ಕುಳಿತು ಚಿತ್ರಗಳನ್ನು ಬಿಡಿಸಿದರು. ಶಿಬಿರ ನಡೆಯುವ ಸುತ್ತಮುತ್ತಲಿನ ಪರಿಸರದ ಚಿತ್ರಗಳನ್ನು ವಿಧ್ಯಾರ್ಥಿಗಳು ಬರೆದರು, ಕಾರ್ಯಕ್ರಮದ ಮಧ್ಯೆ ಅನು ಮತ್ತು ಭವ ಅವಳಿ ಜವಳಿ ವಿದ್ಯಾರ್ಥಿನಿಯರು ಪಾರ್ದನ ಮತ್ತು ಜನಪದ ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಕಳೆ ನೀಡಿದರು. ಯುವ ಪೀಳಿಗೆ ಅಕ್ಕಿ, ಭತ್ತ ಅಲ್ಲದೆ ಮೀನು ಮತ್ತಿತರ ಪದಾರ್ಥಗಳು ಹೇಗೆ ಸಿಗುತ್ತದೆ, ಅದನ್ನು ಬೆಳೆಸುವ ಮತ್ತು ಮೀನು ಏಡಿಗಳನ್ನು ಹಿಡಿಯುವ ಬಗ್ಗೆ ತಿಳಿ ಹೇಳುವ ಒಂದು ವಿಭಿನ್ನ ಪ್ರಯತ್ನದ ಬಗ್ಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಳು ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ಹೇಳಿದರ ಕಾರ್ಯಕ್ರಮದ ಪ್ರಾರಂಭವೇ ವಿಭಿನ್ನವಾಗಿದ್ದು ನಂದಿನಿ ನದಿಯಲ್ಲಿ ದೋಣಿ ಮೂಲಕ ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಮೆಲ್ವಿನ್ ಮೆಂಡೋನ್ಸಾ ಎಸ್. ಜೆ, ಮತ್ತಿತರರು ದೋಣಿ ಮೂಲಕ ತೆನೆಯನ್ನು ತಂದು ಅದನ್ನು ಮಹಾಬಲ ಪೂಜಾರಿ ಕಡಂಬೋಡಿ ದಂಪತಿಗಳಿಗೆ ಹಸ್ತಾತರಿಸಿದರು, ಅದನ್ನು ತುಳು ನಾಡಿನ ಹಿಂದೂ ಬಾಂದವರ ತೆನೆ ಹಬ್ಬದ ಸಂಪರದಾಯದಂತೆ ತುಳಸಿ ಕಟ್ಟೆಯ ಮುಂದೆ ಇರಿಸಿ ನಂತರ ವೇದಿಕೆಗೆ ತೆಗೆದುಕೊಂಡು ಹೋಗಿ ವೇದಿಕೆಯ ಸಮೀಪದ ತೆಂಗಿನ ಮರಗಳಿಗೆ ಅತಿಥಿಗಳು ತೆನೆಯನ್ನು ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಧ್ಯಾರ್ಥಿಗಳಿಗೆ ಕಾರ್ಯಕ್ರಮ ಸವಿ ಅನುಭವಿಸಲು ಮತ್ತು ತರಭೇತಿಗಾಗಿ ಜಲವೇಡಿಕೆಯನ್ನು ನಿರ್ಮಿಸಲಾಗಿತು, ವಿಧ್ಯಾರ್ಥಿಗಳಿಗೆ ಮೀನಿಗೆ ಗಾಳ ಹಾಕುದನ್ನು ಸುಧಾಕರ ಸುವರ್ಣ ಅವರು ಮಾರ್ಗದರ್ಶನ ನೀಡಿದರು. ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಅಡ್ವೆ ಪುರುಷೋತ್ತಮ ವಿದ್ಯಾರ್ಥಿಗಳಿಗಾಗಿ ಪ್ರಕೃತಿ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ನಡೆಸಿಕೊಟ್ಟರು, ಸದಾಶಿವ ಕರ್ಕೇರ ವಿಧ್ಯಾರ್ಥಿಗಳಿಗೆ ಜಲವೇದಿಕೆ ನಿರ್ಮಿಸಿದ್ದರು. ಸಮಾರಂಭದ ಅತಿಥಿಗಳು ತುಳುನಾಡಿನ ಸಂಸ್ಕ್ರತಿ ಹಾಗೂ ಆಚರಣೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಮಂಗಳೂರಿನ ಯುವವಾಹಿನಿ ಕೇಂದ್ರ ಅಧ್ಯಕ್ಷ ಜಯಂತ್ ನಡುಬೈಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅಭಯಚಂದ್ರಜೈನ, ಕೃಷಿ ಮತ್ತು ಪರಿಸರ ಚಿಂತಕ ಡಾ| ನರೇಂದ್ರ ರೈ ದೇರ್ಲ, ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಮೆಲ್ವಿನ್ ಮೆಂಡೋನ್ಸಾ ಎಸ್. ಜೆ, , ಕೃಷಿಕ ತಿಮ್ಮಪ್ಪ ಅಮೀನ್, ಮಾಜಿ ಶಾಸಕ ಕಾಪ್ಟನ್ ಗಣೇಶ್ ಕಾರ್ನಿಕ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಕಡಂಬೋಡಿ ಮಹಾಬಲ ಪೂಜಾರಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಚಂದ್ರಶೇಖರನಾನಿಲ್, ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಯಶೋಧರ ಸಾಲ್ಯಾನ್, ರಾಮಚಂದ್ರ ಬೈಕಂಪಾಡಿ, ರಾಜಾರಾಮ್ ಸಾಲ್ಯಾನ್, ಮಾಜಿ ಮೇಯರ್ ರಜನಿ ದುಗ್ಗಣ್ಣ, ಶೈಲೇಶ್ ಸುವರ್ಣ, ಕುಸುಮಾ ಕಡಂಬೋಡಿ, ಜಯಂತಿ ಸಂಕಮಾರ್, ವಿಜಯಕುಮಾರ್ ಕುಬೆವೂರು, ಗಣೇಶ್ ಬಂಗೇರ, ಭಾಸ್ಕರ ಸಾಲ್ಯಾನ್, ಜಯಂತಿ ಸಂಕಮಾರ್, ಕಲ್ಲೂರು ನಾಗೇಶ್, ಕೆ.ಕೆ.ಪೇಜಾವರ್, ಗೋವಿಂದದಾಸ ಕಾಲೇಜು ವೈಸ್ ಪ್ರಿನ್ಸಿಪಾಲ್ ಸುನೀತಾ, ಎನ್‌ಎಸ್‌ಎಸ್‌ನ ಯೋಜನಾಧಿಕಾರಿ ವೆಂಕಟರಮಣ ಭಟ್, ಕಾರ್ಯಕ್ರಮ ಸಂಯೋಜಕ ಡಾ| ಗಣೇಶ್ ಅಮೀನ್ ಸಂಕಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಅಧ್ಯಯನ ಶಿಬಿರದಲ್ಲಿ ವಿಧ್ಯಾರ್ಥಿಗಳು ಕೃಷಿ ಬದುಕನ್ನು ಅನುಭವಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

Related posts

Leave a Reply