Header Ads
Header Ads
Breaking News

ವಿದ್ಯಾರ್ಥಿಗಳಿಗೆ ಹಾಡುವ ಅವಕಾಶ ಸರಕಾರಿ ಕನ್ನಡ ಶಾಲೆ ಮಕ್ಕಳ ಪ್ರತಿಭೆಗಳ ಅನಾವರಣ ಕೊಲ್ಯದಲ್ಲಿ ನಡೆದ ವಿಭಿನ್ನ ರೀತಿಯ ಹಾಡುವ ಸ್ಫರ್ಧೆ

ಅಲ್ಲಿ ವಿದ್ಯಾರ್ಥಿಗಳಿಗೆ ಹಾಡುವ ಅವಕಾಶವಿತ್ತು. ದೃಶ್ಯ ಮಾಧ್ಯಮಗಳಲ್ಲಿ ನಡೆಯುವ ರಿಯಾಲಿಟಿ ಷೋ ನಂತೆ ನಡೆದ ಕಾರ್ಯಕ್ರಮದಲ್ಲಿ, ಪ್ರತಿಭೆಯಿದ್ದು ಲಾಭಿಯಿಲ್ಲದ ವೇದಿಕೆಯನ್ನು ಕಡ್ಡಾಯವಾಗಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಸಂಘಟಕರು ಕಲ್ಪಿಸಿದ್ದರು.
ಅವಕಾಶ ವಂಚಿತ, ಆರ್ಥಿಕವಾಗಿ ಹಿಂದುಳಿದ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಗುರುತಿಸಿ ಕೊಲ್ಯ ದ್ವಾರಕಾನಗರದ ಸಾಮಗಾನ ಸಾಂಸ್ಕೃತಿಕ ಕಲಾಕೇಂದ್ರ ವತಿಯಿಂದ ಶ್ರೀ ಕೃಷ್ಣ ಭಜನಾ ಮಂದಿರ ಆಶ್ರಯದಲ್ಲಿ ದ್ವಾರಕಾನಗರದಲ್ಲಿ ನಡೆದ ವಿಭಿನ್ನ ರೀತಿಯ ಹಾಡುವ ಸ್ಪರ್ಧೆಗೆ ರಿಯಾಲಿಟಿ ಷೋ ನ ಮೆರುಗು ನೀಡಲಾಯಿತು.

ಒಂದು ವಾರದಿಂದ ನಡೆದ ಸ್ಪರ್ಧಾಳುಗಳ ಆಯ್ಕೆಗೆ ಸಾಮಗಾನ ಕಲಾಕೇಂದ್ರದ ಮುಖ್ಯಸ್ಥ ಹಾಗೂ ಗೋರಿಗುಡ್ಡೆ ಕಿಟೆಲ್ ಮೆಮೋರಿಯಲ್ ಪಿಯು ಕಾಲೇಜು ಪ್ರಾಂಶುಪಾಲ ವಿಠಲ್ ಅಬೂರ ಅವರ ಮನೆಯಲ್ಲಿ ಆಡಿಷನ್ ನಡೆದಿತ್ತು. 25 ಮಂದಿ ಮೂರು ಬಾರಿ ನಡೆದ ಆಡಿಷನ್ನಿನಲ್ಲಿ ತೀರ್ಪುಗಾರರ ತೀರ್ಪಿನಂತೆ ಕೊನೆಯ ಸುತ್ತಿಗೆ ಏಳು ಮಂದಿ ಪ್ರತಿಭೆಗಳನ್ನು ಆಯ್ಕೆ ನಡೆಸಿದ್ದರು. ಆಯ್ಕೆಯಾದ ಏಳು ಮಂದಿ ವಿದ್ಯಾರ್ಥಿಗಳಿಗೆ ಗುರುವಾರ ದ್ವಾರಕಾನಗರದಲ್ಲಿ ವೇದಿಕೆಯನ್ನು ಕಲ್ಪಿಸಲಾಯಿತು. ಪ್ರತಿಭೆಯಿದ್ದರೂ ಶಾಲಾ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬೇರೆ ಎಲ್ಲಿಯೂ ಹಾಡಲು ಅವಕಾಶ ಸಿಗದ ವಿದ್ಯಾರ್ಥಿಗಳೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕರೋಕೆ ಆಧರಿಸಿ ಹಾಡು ಹಾಡಿದ ಏಳು ಮಂದಿ ವಿದ್ಯಾರ್ಥಿಗಳಲ್ಲಿ ಇಬ್ಬರು ಹೆತ್ತವರಿಲ್ಲದೆ ಆಶ್ರಮದಲ್ಲಿ ನೆಲೆಸಿದವರಾಗಿದ್ದಾರೆ. ಉಳಿದ ವಿದ್ಯಾರ್ಥಿಗಳೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರು. ಒಬ್ಬರಿಗಿಂತ ಇನ್ನೊಬ್ಬರು ಹಾಡುವುದರಲ್ಲಿ ನಿಸ್ಸೀಮರಾಗಿ ತೀರ್ಪುಗಾರರಿಗೆ ತೀರ್ಪು ಪ್ರಕಟಿಸಲು ಕಷ್ಟದಾಯಕವಾಗಿತ್ತು. ಈ ನಡುವೆ ಸಂಘಟಕರು ಪ್ರೇಕ್ಷಕರಿಂದಲೂ ಮತ ಸಂಗ್ರಹಿಸಿ ಪ್ರತಿಭೆಗಳನ್ನು ಗುರುತಿಸಿದರು.

ಸಾಮಗಾನ ಸಾಂಸ್ಕೃತಿಕ ಕಲಾಕೇಂದ್ರದ ಸಂಗೀತ ಗುರು ಗಣರಾಜ್ ಭಟ್, ಸಿಂಚನಾ ಆರ್ಕೆಸ್ಟ್ರಾ ತಂಡದ ಶೋಭಾ ಭಾಸ್ಕರನ್, ಅತ್ತಾವರ ಮಧುಸೂದನ ಕುಶೆ ಪ.ಪೂ ಕಾಲೇಜು ಉಪನ್ಯಾಸಕಿ ದುರ್ಗಾಪ್ರಸನ್ನ , , ಉಳ್ಳಾಲ ಭಾರತ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕಸ್ತೂರಿ ಯಸ್.ಸುವರ್ಣ , ಮಂಗಳೂರು ನಾಗಬ್ರಹ್ಮ ಆರ್ಕೆಸ್ಟ್ರಾ ತಂಡದ ಸಂಗೀತ ಭಟ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್, ಮಂಗಳೂರು ರಥಬೀದಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಡಾ| ನವೀನ್ ಎನ್ ಕೊಣಾಜೆ, ಅತ್ತಾವರದ ಮಧುಸೂದನ ಕುಶೆ ಕಾಲೇಜಿನ ಉಪನ್ಯಾಸಕಿ ಸ್ವಾತಿ , ಉದ್ಯಮಿ ವೆಂಕಟೇಶ್ ನ್ಯೂಸ್‌ಪಾಯಿಂಟ್ ಮುಡಿಪು, ಕೊಲ್ಯ ದ್ವಾರಕಾನಗರ ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ನಾಗೇಶ್ ಗಟ್ಟಿ, ಶ್ರೀ ಗುಳಿಗ ಕೊರಗಜ್ಜ ಸೇವಾ ಸಮಿತಿಯ ಯತೀಶ್ ಕೊಲ್ಯ ಮುಖ್ಯ ಅತಿಥಿಗಳಾಗಿದ್ದರು.
ವರದಿ: ಆರೀಫ್ ಉಳ್ಳಾಲ

Related posts

Leave a Reply