Header Ads
Header Ads
Breaking News

ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಕಾನೂನುಗಳನ್ನು ಪಾಲಿಸಿ : ಬಿ.ಎಸ್.ದಿನೇಶ್ ಕುಮಾರ್ ಸಲಹೆ

ಮೂಡುಬಿದಿರೆ : ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಕಾನೂನುಗಳನ್ನು ಪಾಲಿಸಬೇಕು. ಆಲ್ಕೋಹಾಲ್, ಡ್ರಗ್ಸ್‌ನ್ನು ಒಂದು ಸಲ ಸೇವಿಸಿದರೆ ಮತ್ತೆ ಆ ಸುಳಿಯಿಂದ ಹೊರಗೆ ಬರಲು ಕಷ್ಟವಿದೆ. ಆದ್ದರಿಂದ ಇಂತಹ ಮಾದಕ ದ್ರವ್ಯಗಳ ಸೇವನೆ ಮಾಡಿ ವಾಹನಗಳನ್ನು ಚಲಾಯಿಸಿ ಪ್ರಾಣವನ್ನು ಕಳೆದುಕೊಂಡು ಹೆತ್ತವರ ಕಣ್ಣೀರಿಗೆ ಕಾರಣರಾಗಬೇಡಿ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಅವರು ಮೂಡುಬಿದಿರೆ ಜೈನ ಪ.ಪೂ.ಕಾಲೇಜಿನಲ್ಲಿ ನಡೆದ “ರಸ್ತೆ ಸುರಕ್ಷತಾ ಕಾನೂನು ಮತ್ತು ಮಾದಕ ದ್ರವ್ಯ ವ್ಯಸನ”ದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯಶಸ್ಸನ್ನು ಪಡೆಯುವ ಆತುರದಲ್ಲಿ ದಾರಿ ತಪ್ಪಬೇಡಿ ವಿದ್ಯಾರ್ಥಿಗಳು ದಾರಿ ತಪ್ಪಬೇಡಿ. ಮೊಬೈಲ್, ಸಾಮಾಜಿಕ ಜಾಲತಾಣಗಳನ್ನು ಜಾಗೃತೆಯಿಂದ ಬಳಸಿ ಯಾವುದೇ ವ್ಯಕ್ತಿಯ ಮಾನ ಹಾನಿಕಾರಕ ಸಂದೇಶಗಳನ್ನು ಕಳುಹಿಸಬೇಡಿ. ಮೊಬೈಲ್ ಸಂದೇಶಗಳನ್ನು ಓದುತ್ತಾ ಕಾಲ ಕಳೆಯುವುದಕ್ಕಿಂತ ಮಹಾನೀಯರುಗಳ ಉತ್ತಮ ಸಂದೇಶಗಳನ್ನು ಓದಿ ಜೀವನಕ್ಕೆ ಅಳವಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ. ಹೇಮರಾಜ್ ಜೈನ್, ಕಾಲೇಜಿನ ಪ್ರಾಂಶುಪಾಲ ಮಧುಕರ ಸಾಲಿನ್ಸ್, ಉಪನ್ಯಾಸಕ ಮಹಾವೀರ ಜೈನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *