Header Ads
Breaking News

ವಿದ್ಯಾರ್ಥಿಲೆನ ಕಡೀರ್‍ದ ತುಳು ಉಚ್ಛಯ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನ

ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ತುಳು ಪರಿಷತ್ ಆಶ್ರಯದಲ್ಲಿ ವಿದ್ಯಾರ್ಥಿಲೆನ ಕಡೀರ್‍ದ ತುಳು ಉಚ್ಛಯ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನ ಕಾರ್ಯಕ್ರಮ ಮಂಗಳೂರಲ್ಲಿ ಜರುಗಿತು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ರು.

 ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಲೆನ ಕಡೀರ್‍ದ ತುಳು ಉಚ್ಛಯ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನಕ್ಕೆ ಚಾಲನೆ ಸಿಕ್ಕಿತ್ತು. ಕಾರ್ಯಕ್ರಮವನ್ನ ಲಕುಮಿತಂಡ ಮುಖ್ಯಸ್ಥರಾದ ಕಿಶೋರ್ ಡಿ.ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದ್ರು. ನಂತರ ಮಾತನಾಡಿದ ಅವರು, ತುಳು ಉಚ್ಚಯದ ಮೂಲಕ ತುಳು ಭಾಷಾ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿ, ಆ ಮೂಲಕ ಭಾಷಾ ಬೆಳವಣಿಗೆಗೆ ಸಾಧ್ಯ ಅಂತಾ ಹೇಳಿದ್ರು.

ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೋಸ್ಟಲ್‌ವುಡ್ ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಕೊಪ್ಪಳ , ತುಳು ಭಾಷೆಯ ಎಲ್ಲಾ ವಿಭಾಗದ ಬೆಳವಣಿಗೆಗೆ ಈ ಕಾರ್ಯಕ್ರಮ ಸಹಾಯಕವಾಗಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ|ಉದಯ ಕುಮಾರ್ ಇರ್ವತೂರು ವಹಿಸಿದ್ರು. ಬಳಿಕ ಮಾತನಾಡಿದ ಅವರು, ತುಳು ಭಾಷೆಯನ್ನ ಮಾತನಾಡಲು ಕೀಳರಿಮೆ ಬೇಡ. ತುಳುಭಾಷ ಪ್ರಭೇಧಗಳು ಹಲವಿದ್ದು, ಅವುಗಳನ್ನು ನಾವು ತಿಳಿಯುವ ಕೆಲಸ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ತುಳು ಪರಿಷತ್‌ನ ಗೌರವಾಧ್ಯಕ್ಷ ಸ್ವರ್ಣ ಸುಂದರ್, ಅಧ್ಯಕ್ಷ ಡಾ|ಪ್ರಭಾಕರ್ ನೀರುಮಾರ್ಗ, ಪ್ರಧಾನ ಕಾರ್ಯದರ್ಶಿಗಳಾದ ತಾರಾನಾಥ್ ಗಟ್ಟಿ ಕಾಪಿಕಾಡ್, ಬೆನೆಟ್ ಅಮ್ಮಣ್ಣ , ಕಾರ್ಯಕ್ರಮದ ಸಂಚಾಲಕರಾದ ಶೋಭಾ ಶೆಟ್ಟಿ, ಶಿವಾನಂದ ಕರ್ಕೇರ, ಸಾಹಿತಿ ಮೀನಾಕ್ಷಿ ರಾಮಚಂದ್ರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *