Header Ads
Header Ads
Breaking News

ವಿದ್ಯುತ್ ತಂತಿ ಸ್ಪರ್ಶಿಸಿ ಅವಗಡ. ಇಬ್ಬರು ಯುವಕರ ದುರ್ಮರಣ. ಕೆಮ್ಮಣ್ಣು ಗ್ರಾಮದ ಪಡುಕುದ್ರುವಿನಲ್ಲಿ ಘಟನೆ.

ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಯುವಕರು ಸಾವನ್ಬಪ್ಪಿದ ದಾರುಣ ಘಟನೆ ಉಡುಪಿಯಲ್ಲಿ ನಡೆದಿದೆಉಡುಪಿ ತಾಲೂಕಿನ ಕೆಮ್ಮಣ್ಣು ಗ್ರಾಮದ ಪಡುಕುದ್ರುವಿನಲ್ಲಿ ಈ ಘಟನೆ ನಡೆದಿದ್ದು ಯುವಕರ ಸಾವಿನ ಸುದ್ದಿ ಕೇಳಿ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.ರಾಕೇಶ್ ಮತ್ತು ಕೀರ್ತನ್ ಮೃತ ದುರ್ಧೈವಿಗಳು. ಇವರಿಬ್ಬರಿಗೂ ಗಾಳ ಹಾಕಿ ಮೀನು ಹಿಡಿಯುವ ಅಭ್ಯಾಸ ಇತ್ತು. ಇವತ್ತೂ ಕೂಡ ಸ್ಬೇಹಿತರು ಮೀನು ಬೇಟೆ ಗೆ ಹೊರಟಿದ್ದರು. ದುರದೃಷ್ಟವಶಾತ್ ಹೊಳೆ ಬದಿಯಲ್ಲಿ ತುಂಡಾಗಿ ಬಿದ್ದಿದ್ದ ಹೈಟೆನ್ಶನ್ ವಯರ್ ನ್ನು ಇವರು ಗಮನಿಸಿರಲಿಲ್ಲ.ನಡೆದು ಹೋಗುವಾಗವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ಆಘಾತಕಾರಿ ಸುದ್ದಿ ಕೇಳಿ ಇಡೀ ಗ್ರಾಮವೇ ಘಟನಾ ಸ್ಥಳದಲ್ಲಿ ಜಮಾಯಿಸಿದೆ.ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related posts

Leave a Reply