Header Ads
Breaking News

ವಿದ್ಯುತ್ ದರ ಏರಿಕೆ ವಿರುದ್ಧ ಬೈಂದೂರು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ

ಉತ್ಪಾದನಾ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳವಾಗಿದ್ದು ವಿದ್ಯುತ್ ದರ ಏರಿಕೆಗೆ ಅನುಮತಿ ನೀಡಬೇಕೆಂದು ೫ ಎಸ್ಕಾಂಗಳು ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿರುವ ಕ್ರಮವನ್ನು ಖಂಡಿಸಿ ಸಿಪಿಎಂ ಬೈಂದೂರು ವಲಯ ಸಮಿತಿ ನೇತ್ರತ್ವದಲ್ಲಿ ಬೈಂದೂರು ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಬೈಂದೂರು ವಲಯ ಕಾರ್ಯದರ್ಶಿ ಸುರೀಶ್ ಕಲ್ಲಾಗರ ಮಾತನಾಡಿ, ವಿದ್ಯುತ್ ದರವನ್ನು ಚುನಾವಣೆ ಮುಗಿಯುತ್ತಿದ್ದಂತೆ ಏರಿಕೆ ಮಾಡಿರುವುದು ಖಂಡನೀಯವಾಗಿದೆ. ಜಿಲ್ಲೆಯ ಕಾರ್ಮಿಕರು ಮರಳು ಸಮಸ್ಯೆಯಿಂದ ಕೆಲಸವಿಲ್ಲದೇ ಆದಾಯ ಕುಂಠಿತವಾಗಿದೆ. ಇದರ ಪರಿಣಾಮ ಜಿಲ್ಲೆಯ ಎಲ್ಲಾ ವಿಭಾಗದ ಜನರ ಮೇಲೆ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಿರುವುದರಿಂದ ಸರಕಾರ ವಿದ್ಯುತ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಮುಖ್ಯಮಂತ್ರಿಗಳು ಕೊಡಲೇ ಮಧ್ಯಪ್ರವೇಶಿಸಿ ಬೆಲೆ ಇಳಿಕೆಗೆ ಕ್ರಮವಹಿಸಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ನಾಗರತ್ನ ನಾಡ ಮಂಜು ಪೂಜಾರಿ, ರಾಮ ಕಂಬದಕೋಣಿ, ವಿಜಯ ಕೋಯನಗರ, ಈಶ್ವರ,ಗಾಯಿತ್ರಿ ಪಡುವರಿ, ಸಂತೋಷ ನಾಯ್ಕನಕಟ್ಟೆ ಪ್ರತಿಭಟನೆಯಲ್ಲಿ ಹಾಜರಿದ್ದರು.

Related posts

Leave a Reply

Your email address will not be published. Required fields are marked *