Header Ads
Header Ads
Breaking News

ವಿದ್ಯುತ್ ಪಸರಿಸಿ ಇಬ್ಬರಿಗೆ ಗಾಯ

ಪುತ್ತೂರು : ಪುತ್ತೂರು ನಗರದ ಮಾಯಿದೆ ದೇವುಸ್ ಚರ್ಚ್ ಎದುರು ವಿದ್ಯುತ್ ಕಾಮಗಾರಿ ನಡೆಸುತ್ತಿದ್ದ ವೇಳೆ ಏಕಾಏಕಿಯಾಗಿ ಇನ್ವರ್ಟರ್ ವಿದ್ಯುತ್ ಪಸರಿಸಿದ ಪರಿಣಾಮವಾಗಿ ಇಬ್ಬರು ಕಾಮಗಾರಿ ಕಾರ್ಮಿಕರು ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.

ನಂಜನಗೂಡು ತಾಲ್ಲೂಕಿನ ಕಸಿವಿನಹಳ್ಳಿ ಹೋಬಳಿಯ ಸೂರಳ್ಳಿ ಗ್ರಾಮದ ಹುಚ್ಚ ನಾಯಕ ಅವರ ಪುತ್ರ ಬಸವ ನಾಯಕ (30) ಮತ್ತು ಶಿವಣ್ಣ ನಾಯಕ ಅವರ ಪುತ್ರ ರವಿ (19) ಗಾಯಗೊಂಡವರು. ಗಾಯಾಳುಗಳ ಪೈಕಿ ಬಸವ ನಾಯಕ ಅವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳಿಬ್ಬರನ್ನು ಪುತ್ತೂರಿನ ಪುತ್ತೂರುಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ನಗರದಲ್ಲಿ ಶನಿವಾರ ವಿದ್ಯುತ್ ನಿಲುಗಡೆ ಮಾಡಿ ವಿದ್ಯುತ್ ಎಲ್‌ಟಿ ಲೈನಿಗೆ ಬೈಂಡಿಂಗ್ ಅಳವಡಿಸುವ ಕಾಮಗಾರಿ ನಡೆಯುತ್ತಿತ್ತು. ಬೆಂಗಳೂರಿನ ಅರವಿಂದ ಎಲೆಕ್ಟ್ರಿಕಲ್ಸ್ ಕಂಪನಿಯವರು ಈ ಕಾಮಗಾರಿಯ ಗುತ್ತಿಗೆದಾರರಾಗಿದ್ದು, ಕಂಪನಿಯ 10 ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಮಾಯಿದೆ ದೇವುಸ್ ಚರ್ಚ್ ಎದುರು ಬಸವ ನಾಯಕ ಮತ್ತು ರವಿ ಅವರು ವಿದ್ಯುತ್ ಕಂಬವನ್ನೇರಿ ಕಾಮಗಾರಿ ನಿರ್ವಹಿಸುತ್ತಿದ್ದ ವೇಳೆ ಇನ್ವರ್ಟರ್ ವಿದ್ಯುತ್ ಪಸರಿಸಿ, ಶಾಕ್ ಹೊಡೆದಿತ್ತು. ಈ ವೇಳೆ ಕೆಳಗಿನ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರವಿ ಅವರು ಕೆಳಗೆ ಬಿದ್ದಿದ್ದು, ಸಣ್ಣ ಪ್ರಮಾಣದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬವನ್ನೇರಿ ಮೇಲ್ಗಡೆ ಕೆಲಸ ನಿರ್ವಹಿಸುತ್ತಿದ್ದ ಬಸವ ನಾಯಕ ಅವರು ಇನ್ವರ್ಟರ್ ವಿದ್ಯುತ್ ಪಸರಿಸಿದ ವೇಳೆ ಗಾಯಗೊಂಡು ಅಲ್ಲೇ ಉಳಿದಿದ್ದು, ಗಾಯಾಳುವನ್ನು ಬಳಿಕ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

Leave a Reply