Header Ads
Breaking News

ವಿದ್ಯುತ್ ವೋಲ್ಟೇಜ್‍ನಲ್ಲಿ ವ್ಯತ್ಯಯ ಬಂದ ಹಿನ್ನೆಲೆ : ಬಡ ಕುಟುಂಬದ ಮನೆ ಬೆಂಕಿಗಾಹುತಿ

ಮಂಜೇಶ್ವರ: ವಿದ್ಯುತ್ ವೋಲ್ಟೇಜ್‍ನಲ್ಲಿ ವ್ಯತ್ಯಯ ಬಂದ ಹಿನ್ನೆಲೆಯಲ್ಲಿ ಬಡ ಕುಟುಂಬದ ಮನೆಯೊಂದು ಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.

ಬೆಂಕಿಗಾಹುತಿಯಿಂದಾಗಿ ಮನೆಯಲ್ಲಿದ್ದ ಫ್ರಿಡ್ಜ್, ವಾಶಿಂಗ್ ಮಿಶನ್, ಹಾಸಿಗೆ, ಗೃಹಪಯೋಗಿ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿರುವ ಘಟನೆ ಮಂಜೇಶ್ವರ ಗ್ರಾಮ ಪಂಚಾಯತಿನ ಹತ್ತೊಂಬತ್ತನೇ ವಾರ್ಡು ಫಸ್ಟ್ ಸಿಗ್ನಲ್ ಎಂಬಲ್ಲಿ ನಡೆದಿದೆ. ಫೈಸಲ್ ಮಾಸ್ಟರ್ ಎಂಬವರ ಮನೆ ಬೆಂಕಿಗಹುತಿಯಾಗಿದೆ. ಇವರ ಇಬ್ಬರು ಮಕ್ಕಳು ಮಾತ್ರ ಮನೆಯಲ್ಲಿದ್ದರು. ಆದರೆ ಬೆಂಕಿ ಅವಘಡ ಸಂದರ್ಭ ಈ ಎರಡೂ ಮಕ್ಕಳು ಹೊರಗೆ ಹೋಗಿರುವ ಹಿನ್ನೆಲೆಯಲ್ಲಿ ಜೀವಪಾಯ ಸಂಭವಿಸಿಲ್ಲ. ಮಾಹಿತಿ ಅರಿತು ಊರವರು ತಲುಪುವಷ್ಟರಲ್ಲಿ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು. ಸುಮಾರು ಮೂರು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

Related posts

Leave a Reply

Your email address will not be published. Required fields are marked *