Header Ads
Breaking News

ವಿದ್ಯುತ್ ಶಾಕ್ ತಗುಲಿ ಲಾರಿ ಕ್ಲೀನರ್ ಮೃತ್ಯು : ವಿಟ್ಲ ಸಮೀಪದ ಕುಡ್ತಮುಗೇರು ಪಡಾರು ಜಂಕ್ಷನ್‌ನಲ್ಲಿ ಘಟನೆ

ಕೆ.ಎಂ.ಎಫ್ ಫೀಡ್ ಸಾಗಾಟ ಮಾಡುತ್ತಿದ್ದ ಲಾರಿಯ ಕ್ಲೀನರ್ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಇಂದು ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಪಡಾರು ಜಂಕ್ಷನ್‌ನಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಿಂಗಟೆಗೆರೆ ನಿವಾಸಿ ನಿಂಗರಾಜುರವರ ಪುತ್ರ ದುಶ್ಯಾಂತ್ ಮೃತ ದುರ್ದೈವಿಯಾಗಿದ್ದಾರೆ. ಮಾದಕಟ್ಟೆ ಹಾಲು ಶೇಕರಣಾ ಘಟಕಕ್ಕೆ ಕೆ.ಎಂ.ಎಫ್ ಫೀಡ್ ತಂದು ಅಲ್ಲಿ ಸ್ವಲ್ಪ ಚೀಲಗಳನ್ನು ಅನ್ಲೋಡ್ ಮಾಡಿ ಬಳಿಕ ಪುಣಚಕ್ಕೆ ತೆರಳುವ ಸಲುವಾಗಿ ಪಡಾರು ಜಂಕ್ಷನ್‌ನಲ್ಲಿ ಲಾರಿಯನ್ನು ನಿಲ್ಲಿಸಿ ಚಾಲಕ ಸ್ಥಳೀಯರೊಂದಿಗೆ ದಾರಿ ಕೇಳುತ್ತಿದ್ದ ವೇಳೆ ಕ್ಲೀನರ್ ದುಶ್ಯಾಂತ್ ಲಾರಿಯ ಕ್ಯಾಬಿನ್ ಮೇಲಿದ್ದ ಅವರ ಶರ್ಟ್‌ನ್ನು ತೆಗೆಯಲು ಹತ್ತಿದ ವೇಳೆ ಮೇಲ್ಬಾಗದಲ್ಲಿ ಹಾದು ಹೋದ ವಿದ್ಯುತ್ ತಂತಿ ಅವರಿಗೆ ತಗುಲಿದೆ. ವಿದ್ಯುತ್ ಶಾಕ್ ನಿಂದ ಕೆಳೆಕ್ಕೆಸೆಯಲ್ಪಟ್ಟ ದುಶ್ಯಾಂತ್ ರವರು ಸ್ಥಳದಲ್ಲೇ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತದೇಹವನ್ನು ವಿಟ್ಲ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *