
ವಿಧಾನ ಪರಿಷತ್ನ ಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಘರ್ಷಣೆ ಆರಂಭಕ್ಕೆ ಮೂಲಕ ಕಾರಣವೇನು ಎಂಬ ಬಗ್ಗೆ ಚರ್ಚೆ ಆಗಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪತ್ರಕರ್ತರು ಬರದಂತೆ ಬಾಗಿಲು ಬಂದು ಮಾಡಿದ್ರೆ ಸರಿಯಾಗುತ್ತದೆಯೇ? ಹಾಗೆಯೇ ಸದನದ ಬಾಗಿಲು ಮುಚ್ಚಿ ಸಭಾಪತಿ ಬರದಂತೆ ತಡೆದದ್ದು ಸರಿಯಾಗುತ್ತಾ? ಘರ್ಷಣೆ ಆರಂಭಕ್ಕೆ ಮೂಲ ಕಾರಣವೇನು? ಈ ಬಗ್ಗೆ ಚರ್ಚೆ ಆಗಬೇಕು ಎಂದು ಅವರು, ಎಳೆದದ್ದು ಸರಿಯಾ? ಅನ್ನೋದಕ್ಕಿಂತಲೂ ಕೂತದ್ದು ಸರಿಯಾ? ಈ ಹಿಂದೆಯೂ ಬಿಜೆಪಿ ಬಾಗಿಲು ಮುಚ್ಚಿ ಸದನ ನಡೆಸಿತ್ತು. ಬಾಗಿಲು ಒಡೆದಿದ್ದು, ಎಳೆದಾಡಿದ್ದು ಎಲ್ಲವೂ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಆಗಿದೆ ಅಷ್ಟೇ. ಉಪಸಭಾಪತಿ ಕೂರದೇ ಸಮಸ್ಯೆ ಪರಿಹಾರ ಮಾಡಬಹುದಿತ್ತು ಎಂದು ಹೇಳಿದರು.