Header Ads
Header Ads
Breaking News

ವಿಧಾನಸಭಾ ಚುನಾವಣೆ ಹಿನ್ನೆಲೆ ಕಾರ್ಕಳದಲ್ಲಿ ವಾಹನ ತಪಾಸಣೆ ಕಾರ್ಯ ಅಕ್ರಮ ಹಣ, ಮದ್ಯ, ಬಟ್ಟೆ ಸಾಗಾಟವಾಗದಂತೆ ತಡೆಯುವ ಉದ್ದೇಶ

ಕಾರ್ಕಳ : ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆ ಗಡಿ ಭಾಗದ ಮುರತಂಗಡಿಯಲ್ಲಿ ಕಾರ್ಕಳ ನಗರ ಠಾಣಾ ಪೋಲಿಸರಿಂದ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪ್ರತಿ ಒಂದು ವಾಹನ ತಪಾಸಣೆ ನಡೆಸುವ ಕಾರ್ಯ ಒಂದು ವಾರದಿಂದ ನಡೆಯುತ್ತಿದೆ. ಅಕ್ರಮ ಹಣ ಹಾಗೂ ಮದ್ಯ ಬಟ್ಟೆ ಹಾಗೂ ಇತರ ವಸ್ತುಗಳ ಸಾಗಾಟವಾಗದಂತೆ ತಡೆಯುವ ಉದ್ದೇಶದಿಂದ ಈ ತಪಾಸಣೆ ನಡೆಯುತ್ತದೆ. ಕಾರ್ಕಳ ತಾಲೂಕಿನ ಸುಮಾರು ೬ ಕಡೆ ಇಂತ ತಪಾಸಣೆ ನಡೆಯುತ್ತದೆ. ಆದರೆ ಇಲ್ಲಿಯ ತನಕ ಯಾವುದೇ ಪ್ರಕರಣ ದಾಖಲಾದ ವರದಿ ಆಗಲಿಲ್ಲ.
ವರದಿ:ಕೆ.ಎಮ್. ಖಲೀಲ್