Header Ads
Header Ads
Breaking News

ವಿಧಾನಸಭೆ ಚುನಾವಣೆ ಹಿನ್ನೆಲೆ ಇವಿಎಂ ಮತ ಯಂತ್ರದ ಬಗ್ಗೆ ಜನ ಜಾಗೃತಿ ಭಟ್ಕಳದ ಚುನಾವಣಾ ಸೆಕ್ಟರ್‌ನಲ್ಲಿ ಕಾರ್ಯಕ್ರಮ

ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಟ್ಕಳದ ಚುನಾವಣಾ ಸೆಕ್ಟರ್ 18ರ ವತಿಯಿಂದ ಶಿರಾಲಿಯ ವಿವಿದ ಪ್ರದೇಶದಲ್ಲಿ ಮತಯಂತ್ರ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿಯನ್ನು ಒದಗಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮೇ 12ರಂದು ಭಟ್ಕಳ ವಿಧಾನ ಸಭಾ ಚುನಾವಣೆಯು ನಡೆಯಲಿದ್ದು ಚುನಾವಣಾ ಸಂದರ್ಭದಲ್ಲಿ ಮತ ಚಲಾಚಣೆಯನ್ನು ಮಾಡಲು ಮತಯಂತ್ರವನ್ನು ಬಳಸಲಾಗುತ್ತಿದೆ. ಈ ಬಗ್ಗೆ ಈಗಾಗಲೆ ಕೆಲವರಲ್ಲಿ ಗೊಂದಲಗಳು ಏರ್ಪಟ್ಟಿದ್ದು ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಧಿಕಾರಿಗಳು ಚುನಾವಣಾ ಸೆಕ್ಟರಗಳ ಮಟ್ಟದಲ್ಲಿ ಜನಸಾಮಾನ್ಯರಲ್ಲಿ ಚುನಾವಣಾ ಇ.ವಿ.ಎಮ್ ಯಂತ್ರಗಳ ಬಗ್ಗೆ ಜಾಗ್ರತಿ ಮೂಡಿಸಲಾಗುತ್ತಿದೆ. ಈ ಹಿನ್ನೆಯಲ್ಲಿ ಶಿರಾಲಿಯ ವಿವಿದ ಜನನಿಬಿಡ ಪ್ರದೇಶಗಳಲ್ಲಿ ಚುನಾವಣಾ ಸೆಕ್ಟರ್ 18 ವತಿಯಿಂದ ಸೆಕ್ಟರ್ ಅಧಿಕಾರಿ ಹಾಗು ಸಹಾಯಕ ಸೆಕ್ಟರ್ ಅಧಿಕಾರಿ ಉದಯ ಬೊರ್‍ಕರ್ ತಂಡದಿಂದ ಜನ ಸಾಮಾನ್ಯರಲ್ಲಿ ಇ.ವಿ.ಎಮ್ ಮತಯಂತ್ರದ ಬಗ್ಗೆ ಜಾಗೃತಿ ಮೂಡಿಸುವ ಪ್ರಯುಕ್ತ ಇ.ವಿ.ಎಮ್ ಜನ ಜಾಗ್ರತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಹಾಯಕ ಸೆಕ್ಟರ್ ಅಧಿಕಾರಿ ಉದಯ ಬೋರ್‍ಕರ್ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ವಿವಿ ಪ್ಯಾಟ್ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ವರದಿ: ರಾಘವೇಂದ್ರ ಭಟ್ಕಳ