Header Ads
Header Ads
Header Ads
Breaking News

ವಿಧಿಯಾಟಕ್ಕೆ ಬಲಿಯಾದ ಕುಟುಂಬ ಮೈಸೂರು ತಲುಪ ಬೇಕಾಗಿದ್ದ ಮೂವರು ಸ್ಮಶಾನಕ್ಕೆ ಹುಣಸೂರು ಸಮೀಪ ನಡೆದ ವಾಹನ ಅಪಘಾತ ಉಳ್ಳಾಲದ ಮೂವರು ನಿವಾಸಿಗಳ ದುರ್ಮರಣ

ಉಳ್ಳಾಲ: ಇನ್ನೇನು ಒಂದು ಗಂಟೆಯಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಕುಟುಂಬ ಮೈಸೂರು ತಲುಪುವವರಿದ್ದರು, ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮಾರ್ಗಮಧ್ಯೆ ಸಂಭವಿಸಿದ ಭೀಕರ ವಾಹನ ಅಪಘಾತಕ್ಕೆ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ.

ತೊಕ್ಕೊಟ್ಟುವಿನಿಂದ ಮೈಸೂರಿಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಹುಣಸೂರು ತಾಲೂಕಿನ ಬಿಳಿಕೆರೆ ಸಮೀಪ ವಾಹನವೊಂದನ್ನು ಓವರ್‌ಟೇಕ್ ಮಾಡುವ ಸಂದರ್ಭ ಎದುರಿನಲ್ಲಿ ತೆರಳುತ್ತಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ಘಟನೆ ನಡೆದಿದೆ. ಘಟನೆಯಲ್ಲಿ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ತೊಕ್ಕೊಟ್ಟುವಿನ ಸ್ಮಾಟ್ ಸಿಟಿ ವಸತಿ ಸಂಕೀರ್ಣದಲ್ಲಿ ಬಾಡಿಗೆಗಿದ್ದ ಹಮೀದ್ (52) , ಅವರ ಪುತ್ರ ಹಾತೀಫ್ (11) ಹಾಗೂ ಸಹೋದರ ಇಕ್ಬಾಲ್ (45) ಮೃತಪಟ್ಟವರು.

ಚಾಲಕನ ಎಡಬದಿಯಲ್ಲಿ ಪುತ್ರನ ಜತೆಗೆ ಕುಳಿತಿದ್ದ ಹಮೀದ್ ಮತ್ತು ಅವರ ಹಿಂಬದಿಯಲ್ಲಿ ಕುಳಿತಿದ್ದ ಸಹೋದರ ಇಕ್ಬಾಲ್ ಮೂವರು ತಲೆಗೆ ಗಂಭಿರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಹಿಲ್, ಅನ್ವೀಝ್, ಖತೀಜಾ ಎಂಬವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಉಳಿದ 12 ಮಂದಿ ಗಂಭೀರ ಗಾಯಗೊಂಡು ಕೆಲವರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿದೆ.

ವರದಿ: ಆರಿಫ್ ಉಳ್ಳಾಲ

Related posts

Leave a Reply