Header Ads
Header Ads
Header Ads
Breaking News

ವಿನಾಃಕಾರಣ ಯುವಕನಿಗೆ ತಂಡದಿಂದ ಹಲ್ಲೆ ಉದ್ಯಾವರ ಕರೋಡಾದಲ್ಲಿ ಘಟನೆ ಅಹ್ಮದ್ ಮುನೀರ್‌ಗೆ ಮಾರಕಾಯುಧಗಳಿಂದ ಹಲ್ಲೆ

ಮಂಜೇಶ್ವರ: ಯುವಕನೊಬ್ಬನನ್ನು ಪೋನ್ ಕರೆ ಮಾಡಿ ಕರೆಸಿದ ತಂಡವೊಂದು ಮಾರಕಾಯುಧಗಳಿಂದ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಘಟನೆ ಉದ್ಯಾವರ ಕರೋಡಾ ಪರಿಸರದಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ಎಸ್‌ಎ ರಹ್ಮಾನ್ ಎಂಬವರ ಪುತ್ರ ಆಹ್ಮದ್ ಮುನೀರ್ ಎಂಬಾತ ಗಾಯಗಳೊಂದಿಗೆ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.


ಅನಾಮಧೇಯ ಕರೆಯೊಂದು ಬಂದು ಅವಾಚ್ಯ ಶಭ್ದಗಳಿಂದ ನಿಂದಿಸಿದ ಬಳಿಕ ಆಹ್ಮದ್ ಮುನೀರ್‌ನನ್ನು ಕರೋಡಾ ಮಸದಿಯಲ್ಲಿಗೆ ಕರೆಸಿದ ಸುಮಾರು 15  ಮಂದಿಯ ತಂಡ ತಲ್ವಾರ್, ಕತ್ತಿ, ರಾಡ್‌ಗಳಿಂದ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಇದನ್ನು ತಡೆಯಲು ಹೋದ ಸಹೋದರ ತಂಝೀಲ್ ಹಾಗೂ ಸ್ನೇಹಿತ ಅನ್ಸಾರಿಗೂ ತಂಡ ಹಲ್ಲೆಗೈದಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

Related posts

Leave a Reply