Header Ads
Header Ads
Breaking News

ವಿನಾಃ ಕಾರಣ ರೈ ವಿರುದ್ಧ ಹರಿಕೃಷ್ಣ ಬಂಟ್ವಾಳ ಆರೋಪ.ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಪ್ರತಿಕ್ರಿಯೆ

ಬಂಟ್ವಾಳ: ಚುನಾವಣೆ ಮುಗಿದ ಬಳಿಕವೂ ಬಿ.ರಮಾನಾಥ ರೈಯವರ ವಿರುದ್ದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕ್ಷುಲಕ ಆರೋಪವನ್ನು ಮಾಡುತ್ತಿದ್ದಾರೆ. ನಾವು ಅನುಮತಿ ಪಡೆದು ಕಾನೂನುಬದ್ದವಾಗಿಯೇ ಮರಳುಗಾರಿಕೆ ಹಾಗೂ ಜಲ್ಲಿಕ್ರಷರ್ ನಡೆಸುತ್ತಿದ್ದರೂ ಅಕ್ರಮ ಮರಳುಗಾರಿಕೆ, ಜಲ್ಲಿಕ್ರಷರ್ ನಡೆಸುತಿರುವುದಾಗಿ ಹೇಳುತಿದ್ದಾರೆ. ಸುಳ್ಳು ಆರೋಪ ಮಾಡಿ ನಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹರಿಕೃಷ್ಣ ಬಂಟ್ವಾಳ್ ಅವರ ಟೀಕೆಗಳಿಗೆ ತಕ್ಕ ಉತ್ತರ ನೀಡಿದರು. ಬಿಲ್ಲವ ಸಮಾಜದ ಮುಖಂಡ ಎಂದು ಹೇಳುವ ಹರಿಕೃಷ್ಣ ಬಂಟ್ವಾಳ, ರಾಜೇಶ್ ನಾಕ್ ಅವರನ್ನು ಗೆಲ್ಲಿಸಿದ್ದು ನಾನು ಎಂದು ಬೀಗುತ್ತಿದ್ದಾರೆ. ಆದರೆ ಜನಾರ್ದನ ಪೂಜಾರಿಯವರನ್ನು ಅವರಿಗೆ ಗೆಲ್ಲಿಸಲಾಗಲಿಲ್ಲ ಎಂದು ಟೀಕಿಸಿದರು. ನಾವು ಇಲ್ಲಿಯವರೆಗೆ ಯಾವುದೆ ಕಮೀಷನ್ ತೆಗೆದುಕೊಂಡಿಲ್ಲ. ಇದನ್ನು ದೇವರ ಎದುರು ಹೇಳಲು ಸಿದ್ಧ. ಆದರೆ ಪೂಜಾರಿಯವರು ಲೋಕಸಭಾ ಸದಸ್ಯರಾಗಿದ್ದಾಗ ಕಾಂಟ್ರಾಕಟ್ರ್‌ಗಳಿಂದ ಹರಿಕೃಷ್ಣ ಬಂಟ್ವಾಳ್ ಕಮೀಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಮರಳು, ಕೋರೆ ನಮ್ಮ ಕಸುಬು ಅದನ್ನು ಕಾನೂನುಪ್ರಕಾರ ಮಾಡುತ್ತಿದ್ದೇವೆ. ಅದಕ್ಕೆ ಬೇಕಾದ ಅನುಮತಿ ಹಾಗೂ ಎಲ್ಲ ದಾಖಲಾತಿಗಳು ನಮ್ಮಲ್ಲಿವೆ. ಆದರೆ ಬಿಜೆಪಿ ಮುಖಂಡರ ಆಪ್ತರು ನಮ್ಮನ್ನು ತೋರಿಸಿ ಅಕ್ರಮ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಮಾಧ್ಯಮಗೋಷ್ಠಿಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಗದೀಶ ಕೊಯ್ಲ, ಮಾಯಿಲಪ್ಪ ಸಾಲಿಯಾನ್, ಸದಾಶಿವ ಬಂಗೇರ, ಬೇಬಿ ಕುಂದರ್, ಪ್ರಶಾಂತ್ ಕುಲಾಲ್, ಪ್ರಕಾಶ್ ಶೆಟ್ಟಿ, ಲೋಲಾಕ್ಷ ಹಾಜರಿದ್ದರು.

Related posts

Leave a Reply