Header Ads
Header Ads
Header Ads
Breaking News

ವಿಪಕ್ಷಗಳ ಪ್ರೇರಣೆಯಿಂದ ಭಾರತ್ ಬಂದ್ ಸಂಪೂರ್ಣ ವಿಫಲ; ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ 

ವಿಪಕ್ಷಗಳ ಪ್ರೇರಣೆಯಿಂದ ಭಾರತ್ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಂದ್ ಕರೆಯನ್ನ ವಿಫಲಗೊಳಿಸಿದ್ದಾರೆ, ದೇಶದೆಲ್ಲೆಡೆ ಬಂದ್ ಕರೆ ಕೊಟ್ಟವರು ನಿರಾಶರಾಗಿದ್ದಾರೆ. ಬಂದ್ ಇಲ್ಲದೇ ಜನರ ನಿರಾಳರಾಗಿದ್ದಾರೆ ಎಂದು ಹೇಳಿದ್ರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳೂರಿಗೆ ಬಂದರೆ ಪ್ರತಿಭಟನೆ ಮಾಡುತ್ತೇನೆ ಎಂಬ ಐವನ್ ಡಿಸೋಜಾ ಹೇಳಿಕೆಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು ನೀಡಿದ್ದಾರೆ. ಹರಿಯುವ ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ ಎಂದು ಪ್ರಶ್ನಿಸಿದ ಅವರು, ಗೃಹ ಸಚಿವರು ಮಂಗಳೂರಿಗೆ ಬಂದರೆ ಸಂಭ್ರಮ ಪಡಬೇಕು. ಕಾಯ್ದೆ ಬಗ್ಗೆ ಮನವರಿಕೆ  ಮಾಡಲು ಗೃಹ ಸಚಿವರೇ ಬರುತ್ತಿದ್ದಾರೆ. ಮನೆ ಬಾಗಿಲಿಗೆ ಬರುವಾಗ ಎಲ್ರೂ ಸ್ವಾಗತಿಸುತ್ತಾರೆ ಅಂದುಕೊಂಡಿದ್ದೆ, ಅದ್ರೆ ಐವನ್ ಡಿಸೋಜಾ ಅಷ್ಟು ಸಣ್ಣತನ ಪ್ರದರ್ಶಿಸದೆ ಸ್ವಾಗತಿಸಲಿ ಎಂದು ಅವರು ಹೇಳಿದ್ರು.

Related posts

Leave a Reply

Your email address will not be published. Required fields are marked *