Header Ads
Header Ads
Breaking News

ವಿಪರೀತ ಮದ್ಯ ಸೇವಿಸಿ ಮಹಿಳೆ ಮೃತ್ಯು ಪುತ್ತೂರಿನ ಏಳ್ಮುಡಿ ಎಂಬಲ್ಲಿ ನಡೆದ ಘಟನೆ ಧಾರವಾಡ ಮೂಲದ ಮಹಿಳೆ ಸಾವು ಶಾರದಾ(50) ಮೃತ ಮಹಿಳೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು : ಕಳೆದ ಕೆಲವು ವರ್ಷಗಳಿಂದ ಪುತ್ತೂರು ನಗರದಲ್ಲಿ ಕೂಲಿಕಾರ್ಮಿಕೆಯಾಗಿ ದುಡಿದು ಜೀವನ ನಡೆಸುತ್ತಿದ್ದ ಧಾರವಾಡ ಮೂಲದ ಮಧ್ಯವಯಸ್ಕ ಮಹಿಳೆಯೊಬ್ಬರು ವಿಷರೀತ ಮದ್ಯ ಸೇವಿಸಿ ಮೃತಪಟ್ಟ ಘಟನೆ ಭಾನುವಾರ ಪುತ್ತೂರು ನಗರದ ಏಳ್ಮುಡಿ ಎಂಬಲ್ಲಿ ಸಂಭವಿಸಿದೆ. 

ಕೊಪ್ಪಳ ಜಿಲ್ಲೆಯ ಕುಷ್ಠಗಿ ನಿವಾಸಿ ಪಡಿಯಪ್ಪ ಎಂಬಾತನ ಜೊತೆ ಪುತ್ತೂರಿನಲ್ಲಿ ವಾಸ್ತವ್ಯವಿದ್ದ ಧಾರವಾಡ ಮೂಲದ ಶಾರದಾ (50) ಮೃತಪಟ್ಟ ಮಹಿಳೆ.
ಶಾರದಾ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದು, ಆಕೆ ಗಂಡನನ್ನು ತ್ಯಜಿಸಿ ಪಡಿಯಪ್ಪ ಎಂಬಾತನ ಜೊತೆ ವಾಸ್ತವ್ಯವಿದ್ದಳೆಂದು ತಿಳಿದು ಬಂದಿದೆ. ಮದ್ಯ ವ್ಯಸನಿಯಾಗಿದ್ದ ಶಾರದಾ ಅವರು ಶನಿವಾರ ಸಂಜೆ ವಿಪರೀತ ಮದ್ಯ ಸೇವಿಸಿ ಪುತ್ತೂರಿನ ಏಳ್ಮುಡಿಯಲ್ಲಿ ರಸ್ತೆ ಬದಿ ಬಿದ್ದದ್ದು, ಬಿದ್ದಲ್ಲಿಂದ ಏಳಲಾಗದ ಆಕೆ ಅಲ್ಲೇ ಭಾನುವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.